ಚೆನ್ನೈ: ತಮಿಳುನಾಡಿನ ರಾಮನಾಥಪುರದಿಂದ ರಾಮೇಶ್ವರಂ-ಧನುಷ್ಕೋಡಿ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಹೊಸ ಪಂಬನ್ ರಸ್ತೆ ಸೇತುವೆ ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಪ್ರಸ್ತಾಪ ಮಾಡಿದೆ.
ಪರಮಕುಡಿಯಿಂದ ಧನುಷ್ಕೋಡಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ-49ರ ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಾಡು ಮಾಡುವ ಯೋಜನೆಯ ಭಾಗವಾಗಿ ಈ 1.880 ಕಿ.ಮೀನ ಹೊಸ ರೋಡ್ ಬ್ರಿಡ್ಜ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಈ ಯೋಜನೆಯ ಒಟ್ಟಾರೆ ವೆಚ್ಚ 1,842 ಕೋಟಿ ರೂ.
ಗಲ್ಫ್ ಆಫ್ ಮನ್ನಾರ್ ಮರೈನ್ ನ್ಯಾಷನಲ್ ಪಾರ್ಕ್‌ನ ಜೀವವೈವಿಧ್ಯ ಸೂಕ್ಷ್ಮ ವಲಯ(ಇಎಸ್‌ಝೆಡ್)ದ ಮೇಲೆಯೇ ಈ ಸೇತುವೆ ನಿರ್ಮಾಣವಾಗಲಿದೆ. ಈಗಿರುವಂಥ ದ್ವಿಪಥ ಅನ್ನಾಯ್ ಇಂದಿರಾ ಗಾಂಧಿ ಸೇತುವೆಯಲ್ಲಿ ದಟ್ಟಣೆ ಅಧಿಕವಾದಾಗ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 6 ಹಾಗೂ 8 ಪಥದ ರಸ್ತೆಯನ್ನಾಗಿ ವಿಸ್ತರಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗುತ್ತದೆ. ಆದರೆ, ಈ ಯೋಜನೆ ಸಾಕಾರಕ್ಕೆ 370 ಹೆಕ್ಟೇರ್ ಭೂಮಿಯ ಅವಶ್ಯಕತೆಯಿದ್ದು, ಈ ಪೈಕಿ 9 ಹೆಕ್ಟೇರ್ ಪ್ರದೇಶವು ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತದೆ ಎಂದು “ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
1.880 ಕಿ.ಮೀ.- ಪ್ರಸ್ತಾವಿತ ಸೇತುವೆಯ ಉದ್ದ
4- ಎಷ್ಟು ಪಥದ ರಸ್ತೆ?
1,842 ಕೋಟಿ ರೂ.- ಯೋಜನೆಯ ಒಟ್ಟು ವೆಚ್ಚ
370 ಹೆಕ್ಟೇರ್- ಅಗತ್ಯವಿರುವ ಒಟ್ಟು ಭೂಮಿ
ಹಳೆಯ ಸೇತುವೆ
ಎನ್.ಎಚ್.49
9.393 ಹೆಕ್ಟೇರ್- ಮರೈನ್ ನ್ಯಾಷನಲ್ ಪಾರ್ಕ್
361.068 ಹೆಕ್ಟೇರ್- ರಕ್ಷಣೆ ವ್ಯಾಪ್ತಿಯಲ್ಲಿ ಇಲ್ಲದ ಪ್ರದೇಶ
39 ಕಿಮೀ- ಪರಮಕುಡಿ- ರಾಮನಾಥಪುರಂ ವರೆಗಿನ ದೂರ
63 ಕಿಮೀ- ರಾಮನಾಥಪುರಂ-ರಾಮೇಶ್ವರಂ ವರೆಗಿನ ದೂರ
9 ಹೆಕ್ಟೇರ್ ಪ್ರದೇಶವು ಸೂಕ್ಷ್ಮ ವಲಯ