Advertisement

Palthadu: ಮಣಿಕ್ಕರದಲ್ಲಿ ವ್ಯಾನ್‌ ಪಲ್ಟಿ: ಪ್ರಯಾಣಿಕರಿಗೆ ಗಾಯ

12:43 AM Oct 23, 2023 | Team Udayavani |

ಸವಣೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ಮಣಿಕ್ಕರದಲ್ಲಿ ವ್ಯಾನ್‌ ಪಲ್ಟಿಯಾಗಿದೆ. ಪಾಲ್ತಾಡು ಸಮೀಪದ ಆಲಂತಡ್ಕದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಈಶ್ವರಮಂಗಲಕ್ಕೆ ಹೊರಟಿದ್ದ ವ್ಯಾನ್‌ ಪಾಲ್ತಾಡು ಮಣಿಕ್ಕರದಲ್ಲಿ ಪಲ್ಟಿಯಾಗಿದೆ.

Advertisement

ವ್ಯಾನಿನಲ್ಲಿ 19 ಜನ ಪ್ರಯಾಣಿಸುತ್ತಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಸ್ತೆಯ ಮಧ್ಯೆ ವ್ಯಾನ್‌ ಅಡ್ಡಲಾಗಿ ಬಿದ್ದ ಪರಿಣಾಮ ಬೆಳ್ಳಾರೆ-ಪುತ್ತೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಸ್ಥಳಕ್ಕೆ ಬೆಳ್ಳಾರೆ ಠಾಣಾ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next