Advertisement

ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯ ಗರಿಗಳ ರವಿವಾರ ಆಚರಣೆ

01:00 AM Apr 11, 2022 | Team Udayavani |

ಮಂಗಳೂರು/ ಉಡುಪಿ: ಕ್ರೈಸ್ತರು ಎ. 10ರಂದು ಗರಿಗಳ ರವಿವಾರ (ಪಾಮ್‌ ಸಂಡೇ) ಆಚರಿಸುವುದರೊಂದಿಗೆ ಪವಿತ್ರ ಸಪ್ತಾಹ ಆರಂಭಗೊಂಡಿದೆ.

Advertisement

ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತರನ್ನು ಬಂಧಿಸಿ ಶಿಲುಬೆಗೇರಿಸುವ ಮುನ್ನ ಅವರು ಜರುಸಲೇಂ ನಗರ ಪ್ರವೇಶಿಸಿದ ಸಂದರ್ಭದಲ್ಲಿ ಅಲ್ಲಿನ ಜನರು ಪ್ರೀತ್ಯಾದರಗಳಿಂದ ಸ್ವಾಗತ ಕೋರಿದ್ದನ್ನು ಸ್ಮರಿಸಿ ಈ ದಿನವನ್ನು ಆಚರಿಸಲಾಗುತ್ತದೆ.

ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ರೊಜಾರಿಯೊ ಕೆಥೆಡ್ರಲ್‌ನಲ್ಲಿ ಹಾಗೂ ಉಡುಪಿ ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅವರು ಬಾರ್ಕೂರಿನ ಸಂತ ಪೀಟರ್‌ ಚರ್ಚ್‌ನಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿ ಸಂದೇಶ ನೀಡಿದರು.

ರೊಜಾರಿಯೊ ಕೆಥೆಡ್ರಲ್‌ನಲ್ಲಿ ಸ್ಥಳೀಯ ರೆಕ್ಟರ್‌ ವಂ| ಆಲ್ಫೆ†ಡ್‌ ಜೆ. ಪಿಂಟೊ, ಸಹಾಯಕ ಗುರು ವಂ| ವಿನೋದ್‌ ಲೋಬೊ, ವಂ| ವಿಕ್ಟರ್‌ ಡಿ’ಸೋಜಾ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು. ಬಾರ್ಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಧರ್ಮಗುರು ವಂ| ಫಿಲಿಪ್‌ ನೆರಿ ಅರಾನ್ಹಾ, ಅತಿಥಿಗಳಾಗಿ ಧರ್ಮಗುರು ವಂ| ಚಾರ್ಲ್ಸ್‌
ಸಲ್ಡಾನ್ಹಾ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೋನ್ಸಾ ಪಾಮ್‌ ಸಂಡೇಯ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ| ಡೆನಿಸ್‌ ಡೆಸಾ, ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ವಂ| ಚಾರ್ಲ್ಸ್‌ ಮಿನೇಜಸ್‌, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ| ಸ್ಟಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್‌ ಬೆಸಿಲಿಕಾದಲ್ಲಿ ವಂ| ಆಲ್ಬನ್‌ ಡಿ’ಸೋಜಾ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.

Advertisement

ಗರಿಗಳ ರವಿವಾರದ ಹಿನ್ನೆಲೆ
2,000 ವರ್ಷಗಳ ಹಿಂದೆ ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು “ಒಲಿವ್‌’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರ ಮಾಡಿ ಕೊಂಡಿದ್ದರು ಎಂಬ ಉಲ್ಲೇಖ ಬೈಬಲ್‌ನಲ್ಲಿದೆ. ಈವಾಗ ಇಲ್ಲಿ ಒಲಿವ್‌ ಮರದ ಗರಿಗಳ ಬದಲು ತೆಂಗಿನ ಗರಿಗಳನ್ನು ಸಾಂಕೇತಿಕವಾಗಿ ಹಿಡಿದು ಹಿಂದಿನ ಘಟನೆಯನ್ನು ಸ್ಮರಿಸುತ್ತಾರೆ.

ಗರಿಗಳ ರವಿವಾರದೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್‌ ಹಬ್ಬದ ಜಾಗರಣೆ ಹಾಗೂ ರವಿವಾರ ಯೇಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.

ಬೆಳ್ತಂಗಡಿ ಧರ್ಮಪ್ರಾಂತ್ಯ
ಬೆಳ್ತಂಗಡಿ: ಇಲ್ಲಿನ ಸಂತ ಲಾರೆನ್ಸ್‌ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಅವರು ಪ್ರಧಾನ ಯಾಚಕರಾಗಿ ಪವಿತ್ರ ಗರಿಗಳನ್ನು ಆಶೀರ್ವದಿಸಿ ಬಲಿ ಪೂಜೆ ಅರ್ಪಿಸಿ ಸಂದೇಶ ನೀಡಿದರು. ವಂ| ಥಾಮಸ್‌ ಕಣ್ಣಾಂಗಳ್‌, ಜ್ಞಾನನಿಲಯ ನಿರ್ದೇಶಕರಾದ ಜೋಸೆಫ್ ಮಟ್ಟಂ, ಪ್ರಧಾನ ಜುಡಿಶೀಯಲ್‌ ವಿರ್ಕಾ ವಂ| ಕುರಿಯಕೋಸ್‌ ವೆಟ್ಟುವಾಯಿ, ಪ್ರೊಕ್ಯುರೇರ್ಟ ವಂ| ಅಬ್ರಹಾಂ ಫ‌ಟ್ಟೇರಿಲ್, ಬೆಳ್ತಂಗಡಿ ಧರ್ಮಪ್ರಾಂತದ ಛಾನ್ಸಿಲರ್‌ ವಂ| ಲಾರೆನ್ಸ್ ಪುನೋಳಿಲ್‌ ಬಲಿಪೂಜೆಯಲ್ಲಿ ಪಾಲ್ಗೊಂಡರು. ಬೆಳ್ತಂಗಡಿ ಧರ್ಮಪ್ರಾಂತಕ್ಕೆ ಸಂಬಂಧಿಸಿದಂತೆ ಒಟ್ಟು 55 ಧರ್ಮಕೇಂದ್ರಗಳಲ್ಲಿ ಪವಿತ್ರ ಕಾರ್ಯಕ್ರಮ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next