Advertisement

ಪಲಿಮಾರು ಮಠ ಪರ್ಯಾಯದ ಕಟ್ಟಿಗೆ ಮುಹೂರ್ತ

07:15 AM Aug 28, 2017 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜ. 18ರಂದು ಆರಂಭಗೊಳ್ಳುವ ಶ್ರೀ ಪಲಿಮಾರು ಮಠದ ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಡೆಯುವ ಕಟ್ಟಿಗೆ ಮುಹೂರ್ತವು ರವಿವಾರ ಸಂಪನ್ನಗೊಂಡಿತು. 

Advertisement

ಬೆಳಗ್ಗೆ ಪಲಿಮಾರು ಮಠದಲ್ಲಿ ವಿಷ್ಣುಸಹಸ್ರನಾಮ, ವೇದ ಪಾರಾಯಣಗಳು ನಡೆದವು. ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀಕೃಷ್ಣ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ನವಗ್ರಹ ದಾನಗಳನ್ನು ನೀಡಿದ ಬಳಿಕ ಪಲಿಮಾರು ಮಠದಿಂದ ವಾದ್ಯ ಘೋಷಗಳಿಂದ ಹೊರಟ ಕಟ್ಟಿಗೆ ಮೆರವಣಿಗೆ ಮಧ್ವಸರೋವರದ ಪಕ್ಕದಲ್ಲಿ ನಿರ್ಮಿಸುವ ಕಟ್ಟಿಗೆ ರಥದ ಸ್ಥಳಕ್ಕೆ ಆಗಮಿಸಿತು. ಅಲ್ಲಿ ಕಟ್ಟಿಗೆ ಮುಹೂರ್ತ ನಡೆಸಲಾಯಿತು.
 
ಎರಡು ವರ್ಷಗಳ ಪರ್ಯಾಯದ ಅವಧಿಗೆ ಬೇಕಾದ ಕಟ್ಟಿಗೆಗಳನ್ನು ಸಂಗ್ರಹಿ ಸುವ ಮುಹೂರ್ತವಾಗಿ ಕಟ್ಟಿಗೆ ಮುಹೂರ್ತ ಸಂಪ್ರದಾಯ ವಾಗಿ ಬಂದಿದೆ. ಶ್ರೀಮಠದ ದಿವಾನ್‌ ಶಿಬರೂರು ವೇದವ್ಯಾಸ ತಂತ್ರಿ, ವ್ಯವ ಸ್ಥಾಪಕ ಬಲರಾಮ ಭಟ್‌, ಪರ್ಯಾಯ ಸ್ವಾಗತ ಸಮಿತಿ ಕಾರ್ಯಾ ಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಮೊದ ಲಾದ ಪದಾಧಿಕಾರಿ ಗಳು ಉಪಸ್ಥಿತರಿದ್ದರು.

ಸುಮಾರು ಒಂದು ತಿಂಗಳಲ್ಲಿ ಆಕರ್ಷಕ ಕಟ್ಟಿಗೆ ರಥ ನಿರ್ಮಾಣ ಗೊಳ್ಳಲಿದೆ.ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನಡೆದಿದ್ದು ಇದು ಮೂರನೆಯ ಮುಹೂರ್ತವಾಗಿದೆ. ಇನ್ನು ನಾಲ್ಕನೆಯದಾದ ಭತ್ತದ ಮುಹೂರ್ತ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next