Advertisement
ದೇಲಂಪಾಡಿ ಗ್ರಾ. ಪಂ.ಗೆ ಸೇರಿರುವ ಪಳ್ಳತ್ತೂರು ಸೇತುವೆಯ ಮೂಲಕ ಸಂಚಾರ ದುಸ್ತರವೂ, ಪ್ರಾಣಾಪಾಯಕ್ಕೆ ಸಾಕ್ಷಿಯಾಗಬೇಕಾಗುತ್ತಿದ್ದರೂ ನೂತನ ನಿರ್ಮಾಣ ಮರೀಚಿಕೆಯಾಗಿತ್ತು. ಆದರೆ ವರ್ಷಗಳಿಂದ ಮೀನಮೇಷ ಎಣಿಸುತ್ತಿದ್ದ ನಿರ್ಮಾಣ ಕಾಮಗಾರಿಗಿದ್ದ ಎಲ್ಲ ಅಡಚಣೆಗಳು ದೂರವಾಗಿವೆ. ಸೇತುವೆ ನಿರ್ಮಾಣ ಹಾಗೂ ಕೊಟ್ಯಾಡಿಯ ವರೆಗಿನ ಸಂಪರ್ಕರಸ್ತೆಯ ನಿರ್ಮಾಣಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಲೋಕೋಪಯೋಗಿ ಇಲಾಖೆ 7.58 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯ ನಂತರ ತ್ವರಿತ ಕಾಮಗಾರಿ ನಡೆಯು ತ್ತಿದೆ. ಕಳೆದ ವರ್ಷದ ಫೆ. 17ರಂದು ಸೇತುವೆ ನಿರ್ಮಾಣಕ್ಕೆ ಆಡಳಿತಾನುಮತಿ ಲಭಿಸಿದ್ದರೂ ತಾಂತ್ರಿಕ ಅಡಚಣೆ ಕಾಮಗಾರಿ ಆರಂಭದ ಅಗತ್ಯ ಕ್ರಮಗಳಿಗೆ ಅಡ್ಡಿಯಾಗಿತ್ತು.ಕರ್ನಾಟಕಕ್ಕೆ ಸೇರಿದ ಈಶ್ವರಮಂಗಲ, ಪುತ್ತೂರು ಮೊದಲಾದ ಪ್ರದೇಶಗಳಿಗೆ ಇದು ಸಂಪರ್ಕ ಕಲ್ಪಿಸುತ್ತಿದೆ. ಈ ರಸ್ತೆಯ ಮೂಲಕ ಕೊಟ್ಯಾಡಿ, ಅಡೂರು ಪ್ರದೇಶಗಳಿಗೆ ಖಾಸಗಿ, ಕರ್ನಾಟಕ ಸರಕಾರಿ ಬಸ್‌ಗಳು, ಇತರ ವಾಹನ ಗಳು ನಿತ್ಯವೂ ಓಡಾಟ ನಡೆಸುತ್ತಿವೆ. ಆದರೆ ಸೇತುವೆ ದುರವಸ್ಥೆಯು ಸಂಚಾರವನ್ನು ಮೊಟಕುಗೊಳಿಸುತ್ತಿದೆ. ಇದರಿಂದಾಗಿ ನಿತ್ಯವೂ ಈ ರಸ್ತೆಯನ್ನು ಆಶ್ರಯಿಸಿರುವ ವಿದ್ಯಾರ್ಥಿಗಳು, ಕಾರ್ಮಿಕರು ಮೊದಲಾದವರು ತೊಂದರೆ ಅನುಭವಿಸಬೇಕಾಗುತ್ತಿದೆ. ಇಲ್ಲೊಂದು ದೊಡ್ಡ ಸೇತುವೆ ನಿರ್ಮಾಣಕ್ಕೆ ಒತ್ತಾಯ ಹಲವು ವರ್ಷ ಗಳಿಂದ ಕೇಳಿಬರುತ್ತಿದೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳುವವರು ಯಾರೂ ಇರಲೇ ಇರಲಿಲ್ಲ.
ಕೊಟ್ಯಾಡಿಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಪಳ್ಳತ್ತೂರು ಕಿರು ಸೇತುವೆ ತೀರಾ ಜರ್ಜರಿತವಾದ ಮುಳುಗು ಸೇತುವೆ. 1997ರಲ್ಲಿ ದೇಲಂಪಾಡಿ ಗ್ರಾಮ ಪಂಚಾಯತ್ ವತಿಯಿಂದ ಪ್ರಸ್ತುತ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇಬ್ಬದಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಇದರ ಮೂಲಕ ಸಂಚಾರ ನಡೆಸಲಾಗುತ್ತಿತ್ತು. ಜೋರಾಗಿ ಮಳೆ ಸುರಿದರೆ ಸೇತು ವೆ ಮೇಲೆ ನೀರು ಹರಿದು ಸಂಚಾರ ಮೊಟಕುಗೊಳ್ಳುತ್ತಿತ್ತು. ಪ್ರಯತ್ನಪೂರ್ವಕವಾಗಿ ದಾಟುವ ಪ್ರಯತ್ನ ಮಾಡಿದರೆ ಸಂಚಾರ ಕಟ್ಟಿಟ್ಟಬುತ್ತಿ. ಇಂತಹ ಪ್ರಯತ್ನ ಜೀವಹಾನಿಗೂ ಕಾರಣವಾದುದು ದುದೆ„ìವ. ಕುಂಬಳೆ ಎಎಸ್‌ಐ ನಾರಾಯಣ ನಾಯ್ಕ ಬೆ„ಕ್ ಸಮೇತ ನೀರು ಪಾಲಾದುದು ವರ್ಷದ ಹಿಂದಿನ ನಡುಕ ಹುಟ್ಟಿಸುವ ವಿಚಾರ. ಜನರ ಸತತ ಒತ್ತಾಯ, ಅ ಧಿಕೃತರ ಪ್ರಯತ್ನದ ಫಲವಾಗಿ ಸೇತುವೆ ಸಾಕಾರಗೊಳ್ಳಲಿದೆ.
Related Articles
ಕರಾರಿನಂತೆ ಎರಡು ವರ್ಷದಲ್ಲಿ ಇದು ಪೂರ್ತಿಗೊಳಿಸಬೇಕು. ಈಗಾಗಲೇ ಪಿಲ್ಲರ್‌ಗಳನ್ನು ಹಾಕುವ ಕೆಲಸ ಆರಂಭಗೊಂಡಿದೆ. ಇಲ್ಲಿನ ತೋಡಿನ ಮೂಲಕ ನೀರು ಹರಿಯುವ ಕಾರಣ ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚಿತವಾಗಿ ತಳಮಟ್ಟದ ತನಕ ಪಿಲ್ಲರ್‌ಗಳನ್ನು ಹಾಕಿದರೆ ಮುಂದಿನ ಕೆಲಸ ಸುಗಮವಾಗಬಹುದು. ಹೀಗಾಗಿ ಪಿಲ್ಲರ್‌ಗೆ ರಂಧ್ರ ಕೊರೆಯುವ ಕಾಮಗಾರಿ ಎಡೆಬಿಡದೆ ಮುಂದುವರಿದಿದೆ. ಅಗತ್ಯ ವಸ್ತುಗಳನ್ನು ಇಲ್ಲಿ ರಾಶಿಹಾಕಲಾಗಿದೆ.
Advertisement
ಸಂಚಾರಕ್ಕೆ ಅಡಚಣೆಇಕ್ಕಟ್ಟು ಪ್ರದೇಶವಾದ ಕಾರಣ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕಾದರೆ ಈ ಮೂಲಕ ಸಾಗುವ ವಾಹನಗಳನ್ನು ತಡೆ ಹಿಡಿಯು ವುದು ಅನಿವಾರ್ಯವಾಗಿತ್ತು. ಹೀಗಾಗಿ ಮಾರ್ಚ್ ತಿಂಗಳ ಮಧ್ಯದಲ್ಲಿಯೇ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಕೇವಲ ಸಮೀಪದ ತೋಟದ ಮೂಲಕ ಕಾಲ್ನಡಿಗೆಯಲ್ಲಿ ಮಾತ್ರಾ ಜನರು ಸಾಗಬೇಕಾಗಿದೆ. ಮಳೆಗಾಲದಲ್ಲಿ ಕಾಲ್ನಡಿಗೆಯೂ ಕಷ್ಟಕರವಾಗಬಹುದು. ವಾಹನಗಳ ಮೂಲಕ ಸಾಗುವವರು ಕೊಟ್ಯಾಡಿ-ಗಾಳಿಮುಖ-ಕರ್ನೂರು ಮೂಲಕ ಸಾಗಬಹುದಾಗಿದೆ.