Advertisement
ಈ ಅವಧಿಯಲ್ಲಿ ಸಂಚಾರವನ್ನು ನಿಬಂಧಿಸಿದ್ದು, ಪರ್ಯಾಯ ರಸ್ತೆಯಾಗಿ ಪಳ್ಳತ್ತೂರು, ಪಂಚೋಡಿಯ ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸಬಹುದಾಗಿದೆ. ಸೇತುವೆ ನಿರ್ಮಾಣ ಮತ್ತು ಪಳ್ಳತ್ತೂರುನಿಂದ ಕೊಟ್ಯಾಡಿ ವರೆಗಿನ ಸಂಪರ್ಕ ರಸ್ತೆಯ ನಿರ್ಮಾಣಕ್ಕಾಗಿ ಕಾಸರಗೋಡು ಲೋಕೋಪಯೋಗಿ ಇಲಾಖೆ 7.5 ಕೋಟಿ ರೂ. ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ಬಳಿಕ ತ್ವರಿತ ಕಾಮಗಾರಿ ನಡೆಯುತ್ತಿದೆ.
Related Articles
ಪಳ್ಳತ್ತೂರು ಹಳ್ಳದಲ್ಲಿ ಬೇಸಗೆಯಲ್ಲಿ ನೀರು ಇರುವುದಿಲ್ಲ. ಮಳೆಗಾಲದಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿಯುವುದರಿಂದ ಅದಕ್ಕೂ ಮುಂಚೆ ಪಿಲ್ಲರ್ ಹಾಕಿದರೆ ಕೆಲಸ ಸುಲಭವಾಗುತ್ತದೆ.
Advertisement
ಈ ನಿಟ್ಟಿನಲ್ಲಿ ಹಳ್ಳದಲ್ಲಿ ಸೇತುವೆಯ ಒಂದು ಬದಿಯಲ್ಲಿ ಪಿಲ್ಲರ್ ಅಳವಡಿಸುವ ಕಾರ್ಯ ಪೂರ್ತಿ ಗೊಂಡಿದೆ. ಇನ್ನು ಕಾಮಗಾರಿ ಮುಂದುವರೆಸಲು ಮಳೆಗಾಲದಲ್ಲೂ ಸಮಸ್ಯೆ ಇಲ್ಲ. ಹಳ್ಳದ ಮೇಲಿನ ಭಾಗದಲ್ಲಿ ಪಿಲ್ಲರ್ ಹಾಕುವ ಕಾರ್ಯ ನಡೆಯುತ್ತಿದೆ. ಕಾಮಗಾರಿಗಳನ್ನು ಹಳ್ಳದ ಎರಡೂ ಕಡೆಗಳಲ್ಲಿ ರಾಶಿ ಹಾಕಿದ್ದಾರೆ.
ಎರಡು ರಾಜ್ಯಗಳಿಗೆ ಸಂಪರ್ಕ ರಸ್ತೆ ಇದು ಕೊಟ್ಯಾಡಿ, ಅಡೂರು, ಮುಳ್ಳೇರಿಯಾ, ಕಾಸರಗೋಡು ಮುಂತಾದ ಕಡೆಗಳಿಗೆ ಹತ್ತಿರದ ರಸ್ತೆಯಾಗಿದೆ. ಕೇರಳ ರಾಜ್ಯದ ಜನರಿಗೆ ಈಶ್ವರಮಂಗಲ, ಪುತ್ತೂರು, ಮಂಗಳೂರು ಕಡೆಗಳಿಗೆ ಸಂಪರ್ಕ ಇದೆ. ಸರಕಾರಿ, ಖಾಸಗಿ, ಇತರ ವಾಹನಗಳು ನಿತ್ಯವೂ ಓಡಾಟ ನಡೆಸುತ್ತಿವೆ. ಕರ್ನಾಟಕ ಪ್ರದೇಶದ ರಸ್ತೆ ಪುತ್ತೂರಿನ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಮುತುರ್ವಜಿಯಿಂದ ಡಾಮರು ಕಂಡಿದೆ. ನೆಟ್ಟಣಿಗೆಮುಟ್ನೂರು ಗ್ರಾ.ಪಂ. ವತಿಯಿಂದ ಸ್ವಲ್ಪ ಭಾಗ ಕಾಂಕ್ರೀಟ್ ಆಗಿದೆ. ಆದರೆ ಕೇರಳಕ್ಕೆ ಸೇರಿದ ರಸ್ತೆಯ ಭಾಗ ನಾದುರಸ್ತಿಯಲ್ಲಿದೆ. ಸಂಚಾರ ಬದಲಾವಣೆ
ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿರುವುದರಿಂದ ಈಶ್ವರ ಮಂಗಲ-ಪಂಚೋಡಿ-ಕರ್ನೂರು – ಗಾಳಿಮುಖವಾಗಿ ಕೊಟ್ಯಾಡಿ, ಆಡೂರಿಗೆ ಸಂಚರಿಸಬಹುದಾಗಿದೆ. ಕಾಲ್ನಡಿಗೆಯಲ್ಲಿ ಹೋಗುವವರು ಸೇತುವೆ ಸಮೀಪದ ತೋಟವನ್ನು ಬಳಸುತ್ತಿದ್ದಾರೆ. ಒಂದು ವರ್ಷ ಸಂಚಾರಕ್ಕೆ ಸಮಸ್ಯೆ ಎದುರಾದರೂ ಮುಂದೆ ಇಲ್ಲಿ ಸರ್ವಋತು ಸೇತುವೆ ಆಗುತ್ತಿರುವುದು ಸ್ಥಳೀಯರಿಗೆ ಸಂತಸ ಮೂಡಿಸಿದೆ. ಮಾಧವ ನಾಯಕ್.ಕೆ