Advertisement

ಅಭಿವೃದ್ಧಿಯಲ್ಲಿ ಭಕ್ತರ ಸಂಕಲ್ಪಶ್ರೇಷ್ಠ: ಒಡಿಯೂರು ಶ್ರೀ

10:07 AM Feb 23, 2019 | Team Udayavani |

ಸುಬ್ರಹ್ಮಣ್ಯ : ಭಗವಂತನಿಗೆ ಭೇಧ- ಭಾವ ಎನ್ನುವುದು ಇಲ್ಲ. ನಿರ್ಮಲ ಮನಸ್ಸಿನಿಂದ ದೇವರನ್ನು ಭಜಿಸಿದರೆ ಭಗವಂತ ಪ್ರತಿಯೊಬ್ಬರಿಗೂ ಒಲಿಯುತ್ತಾನೆ. ಜನತೆ ಜಾತಿ, ಬೇಧ- ಭಾವ ತೊರೆದು ದೇವರ ಕಾರ್ಯದಲ್ಲಿ ತೊಡಗಿದ್ದರ ಪರಿಣಾಮ ದೇವಸ್ಥಾನ ಪುನರುತ್ಥಾನಗೊಂಡು ಅಭಿವೃದ್ಧಿ ಕಾರ್ಯ ಕೈಗೂಡಿದೆ. ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯಾಗುವಲ್ಲಿ ಭಕ್ತರ ಸಂಕಲ್ಪ ಶಕ್ತಿ ಶ್ರೇಷ್ಠವಾದುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಶ್ರೀ ಹೇಳಿದರು.

Advertisement

ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಹರಿಹರೇಶ್ವರ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಅಶಿರ್ವಚನ ನೀಡಿದರು. ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯೆ ವಿಮಲಾ ರಂಗಯ್ಯ, ಶ್ರೀ ಕ್ಷೇ.ಧ.ಗ್ರಾ.ಯೋ.ಯೋಜನಾಧಿಕಾರಿ ಸಂತೋಷ್‌ ಕುಮಾರ್‌ ರೈ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್‌, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಹೊಸೋಳಿಕೆ ಮುಖ್ಯ ಅತಿಥಿಗಳಾಗಿದ್ದರು.  ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೂಜುಗೋಡು, ಆರ್ಥಿಕ ಸಮಿತಿ ಅಧ್ಯಕ್ಷ ಭವಾನಿಶಂಕರ ಪಿಂಡಿಮನೆ, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಜಯಂತ ಬಾಳುಗೋಡು, ಪ್ರಚಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬೀಮಗುಳಿ, ವೇದಿಕೆ ಸಮಿತಿ ಅಧ್ಯಕ್ಷ ಮಧುಸೂದನ ಕಾಪಿಕಾಡು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚಂದ್ರಮೋಹನ್‌ದಾಸ್‌ ನೆತ್ತಾರ, ಊಟೋಪಚಾರ ಸಮಿತಿ ಅಧ್ಯಕ್ಷ ತಾರಾನಾಥ ಮುಂಡಾಜೆ, ವಾಹನ ನಿಲುಗಡೆ ಸಮಿರಿ ಅಧ್ಯಕ್ಷ ರಾಮರ್ಕರಷ್ಣ ನೆತ್ತಾರ, ನೀರಾವರಿ ಸಮಿತಿ ಅಧ್ಯಕ್ಷ ಶಿವರಾಮ ಕಜ್ಜೋಡಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀಧರ್‌ ಭಾಗವತ್‌ ಸ್ವಾಗತಿಸಿ, ರೇಷ್ಮಾ ಪ್ರಕಾಶ್‌ ವಂದಿಸಿದರು. ಕಾರ್ಯಕ್ರಮ ನಿಹಾರಿಕಾ ಕೂಜುಗೋಡು, ಸಂಧ್ಯಾಶ್ರೀ ಭರತೇಶ್‌ ಉರಿಮಜಲು ನಿರೂಪಿಸಿದರು.

ಧರ್ಮ ಜಾಗೃತಿ ಅವಶ್ಯ
ಧಾರ್ಮಿಕ ಉಪನ್ಯಾಸ ನೆರವೇರಿಸಿದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮಾತನಾಡಿ, ಧರ್ಮದ ಕುರಿತು ಜಾಗೃತವಾಗುವುದು ಆವಶ್ಯಕ. ಪುರಾತನ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವುದು ಶ್ರೇಷ್ಠ ಕಾರ್ಯ. ಏಕತಾಭಾವದ ಆರಾಧನೆಯಿಂದ ಭಗವಂತನು ಸಂಪ್ರೀತನಾಗಿ ಭಕ್ತರ ಅಭೀಷ್ಠೆಗಳನ್ನು ಈಡೇರಿಸುತ್ತಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next