Advertisement

ಪಳ್ಳತ್ತಡ್ಕ ಗಣಪತಿ ಶಂಕರನಾರಾಯಣ ಭಟ್ಟ ಅವರಿಗೆ ಗೌರವ ಡಿ.ಲಿಟ್‌

12:38 AM Jun 16, 2024 | Team Udayavani |

ಕಾಸರಗೋಡು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಗಣಪತಿ ಶಂಕರ ನಾರಾಯಣ ಭಟ್‌ ಪಳ್ಳತ್ತಡ್ಕ ಅವರಿಗೆ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರು ಗೌರವ ಡಿ.ಲಿಟ್‌ ಪದವಿ ಪ್ರದಾನ ಮಾಡಿದರು.

Advertisement

ಕೆ.ಪಿ. ಸುಬ್ರಾಯ ಭಟ್‌ ಮತ್ತು ಪರಮೇಶ್ವರಿ ದಂಪತಿಯ ಪುತ್ರರಾದ ಗಣಪತಿ ಶಂಕರನಾರಾಯಣ ಭಟ್‌ ಅವರು ತಿರುಮಲ ತಿರುಪತಿ ದೇವಸ್ಥಾನ ದಲ್ಲಿ ವೇದ ಪಂಡಿತರಾಗಿ 32 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತ ಪೀಠದಲ್ಲಿ “ಆಸ್ಥಾನ ವಿದ್ವಾನ್‌’ ಎಂಬ ಗೌರವಾನ್ವಿತ ಸ್ಥಾನವನ್ನು ಅಲಂಕರಿಸಿದ ಅವರು 30 ವರ್ಷಗಳ ಅವಧಿಯಲ್ಲಿ ವೈದಿಕ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದಾರೆ.

ಪುಣೆಯ ವೇದ ಪೋಷಕ ಸಭಾದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಕೃಷ್ಣ ಯಜುರ್ವೇದದಲ್ಲಿ ವರ್ಣಕ್ರಮ, ವೇದ ನಿತ್ಯಾಮಾಧಿಯತಂ, ವೇದ ವಿಜ್ಞಾನ, ಗಾವೋ ವಿಶ್ವಸ್ಯ ಮಾತರಃ, ಶ್ರುತಿ ಗೂಡಾರ್ಥ ದೀಪಿಕಾ, ಷಡಂಗ ಪರಿಚಾಯ, ಭಾಷ್ಯಾಂತರಂಗ, ಜ್ಞಾನಂ ವಿಜ್ಞಾನ ಸಾಹಿತ್ಯಂ, ವೇದ ವಿವೇಕ, ಶ್ರುತಿ ಸೂಕ್ತಿ ಮಾಲಾ ಮೊದಲಾದವು ಅವರ ಪ್ರಕಟಿತ ಕೃತಿಗಳಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next