Advertisement

ಪಳನಿಯ ಶ್ರೀ ದತ್ತ ಮಂದಿರ ಯೋಗಾಶ್ರಮ: ಶಾಲಾ ಪರಿಕರಗಳ ವಿತರಣೆ

12:31 PM Jun 26, 2018 | Team Udayavani |

ಮುಂಬಯಿ: ಪರಮಪೂಜ್ಯ ಶ್ರೀ ವಿವೇಕಾನಂದ ಮುನಿ ಸ್ವಾಮೀಜಿ ಅವರು ಸ್ಥಾಪಿಸಿದ ಸತಾರಾ ಜಿಲ್ಲೆಯ ಕೋರೆಗಾಂವ್‌ ಪಳನಿಯ ಶ್ರೀ ದತ್ತ ಮಂದಿರ ಯೋಗಾಶ್ರಮದ ಸಮಿತಿಯ ವತಿಯಿಂದ ಉಚಿತ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಜೂ. 21 ಮತ್ತು ಜೂ. 22 ರಂದು ನಡೆಯಿತು.

Advertisement

ಗಣೇಶ್‌ಪುರಿ, ವಜ್ರೆàಶ್ವರಿ, ಭಿವಂಡಿ, ಥಾಣೆ ತಾಲೂಕಿನ ಪಾಲ^ರ್‌ ಜಿಲ್ಲೆಯ ಸುಮಾರು 25 ಪ್ರಾಥಮಿಕ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಉಚಿತವಾಗಿ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಒಂದನೇ ತರಗತಿಯಿಂದ 10 ನೇ ತರಗತಿಯವರೆಗಿನ ಮಕ್ಕಳಿಗೆ ವಿವಿಧ ಬಗೆಯ ನೋಟ್‌ಬುಕ್‌, ವಾಟರ್‌ ಬಾಟಲ್‌, ರೇನ್‌ಕೋಟ್‌, ಕಂಪಾಸ್‌ ಬಾಕ್ಸ್‌, ಸ್ಲೇಟ್‌, ಜೋಮ್ಯಾಟ್ರಿ ಬಾಕ್ಸ್‌, ತಿಂಡಿ-ತಿನಸುಗಳನ್ನು ಗಣ್ಯರು ವಿತರಿಸಿ ಶುಭಹಾರೈಸಿದರು. ಸುಮಾರು 2.50 ಲಕ್ಷಕ್ಕೂ ಅಧಿಕ ನಿಧಿಯನ್ನು ಈ ಯೋಜನೆಗೆ ಬಳಸಲಾಗಿತ್ತು.

ಶ್ರೀ ದತ್ತ ಮಂದಿರ ಯೋಗಾಶ್ರಮ ಪಳನಿಯ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಶ್ರೀಧರ ಶೇರಿಗಾರ್‌, ಉಪಾಧ್ಯಕ್ಷ ಪುರುಷೋತ್ತಮ ಕುಡ್ವ, ಸದಸ್ಯರುಗಳಾದ ಪುನೀತ್‌ ಕುಡ್ವ, ಪೂಜಿತಾ ಕುಡ್ವ, ಜಗದೀಶ್‌ ಮಿಸ್ತಿÅà, ಜಯೇಶ್‌ ಮಾನ್ಕರ್‌, ವಸಾಯಿರೋಡ್‌ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಸಂಚಾಲಕ ದೇವೇಂದ್ರ ಭಕ್ತ, ಜತೆ ಕೋಶಾಧಿಕಾರಿ ಗಣೇಶ್‌ ಪೈ ಉಪಸ್ಥಿತರಿದ್ದರು. ಗಣೇಶ್‌ಪುರಿ ಪರಿಸರದ ಮುಖ್ಯ ಶಿಕ್ಷಕ ರವೀಂದ್ರ ಚಾತುರ್ಯ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ಈ ಸಮಿತಿಯು ಕಳೆದ 14 ವರ್ಷಗಳಿಂದ ಉಚಿತವಾಗಿ ಪ್ರತೀ ವರ್ಷ ಶಾಲಾ ಪರಿಕರಗಳನ್ನು ಸಾವಿರಾರು ವಿದ್ಯಾರ್ಥಿಗಳಿಗೆ ವಿತರಿಸುತ್ತಿದೆ. ಮುಖ್ಯವಾಗಿ ಹಿಂದುಳಿದ ಆದಿವಾಸಿ ವಿದ್ಯಾರ್ಥಿಗಳಿಗೆ ನೆರವು ನೀಡಿ ಅವರಿಗೆ ಶೈಕ್ಷಣಿಕವಾಗಿ ಸಹಕರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next