ಚೆನ್ನೈ: ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸಾಮಿ ಅವರನ್ನು ನೇಮಿಸಿರುವುದಕ್ಕೆ ಚುನಾವಣಾ ಆಯೋಗ ಸಮ್ಮತಿಸಿದೆ. ಈ ಬಗ್ಗೆ ಪಕ್ಷದ ವಕ್ತಾರ ಆರ್.ಎಂ. ಬಾಬು ಮುರುಗವೇಲ್ ಟ್ವೀಟ್ ಮಾಡಿದ್ದಾರೆ.
Advertisement
ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ ಕಾನೂನು ಹೋರಾಟ ಮಾಡುತ್ತಿರುವ ವೇಳೆಯೇ ಬೆಳವಣಿಗೆ ನಡೆದಿದೆ. ಪನೀರ್ ಸೆಲ್ವಂ ಸದ್ಯ ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ. ಮಾ.28ಕ್ಕೆ ಪ್ರಧಾನ ಕಾರ್ಯ ದರ್ಶಿಯಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಜಗಳ ತಾರಕಕ್ಕೇರಿತ್ತು.