Advertisement
ಬಹುಮತದ ಸಮರದಲ್ಲಿ ಪಳನಿಸ್ವಾಮಿ ಜಯಭೇರಿ ಬಾರಿಸುತ್ತಿದ್ದಂತೆಯೇ ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಶಮನವಾಯಿತು ಎಂದು ಜನರು ಭಾವಿಸಿದ್ದರಾದರೂ ಅದು ನಿಜವಾಗಲಿಲ್ಲ. ವಿಧಾನಸಭೆಯಲ್ಲಾದ ಘಟನೆಗಳ ಕುರಿತು ಒಂದೆಡೆ ಡಿಎಂಕೆ ನಾಯಕರು ರಾಜ್ಯಪಾಲರಿಗೆ ದೂರು ನೀಡಿದರೆ, ಮತ್ತೂಂದೆಡೆ, ತಮ್ಮ ಬಟ್ಟೆ ಹರಿಯಲಾಗಿದೆ ಎಂದು ಆರೋಪಿಸಿ ಡಿಎಂಕೆ ನಾಯಕ ಸ್ಟಾಲಿನ್ ಮರೀನಾ ಬೀಚ್‌ನಲ್ಲಿ ನಿರಶನ ಕುಳಿತರು. ಅಲ್ಲಿಗೆ ತೆರಳಿದ ಪೊಲೀಸರು, ಸ್ಟಾಲಿನ್‌ರನ್ನು ವಶಕ್ಕೆ ಪಡೆದುಕೊಂಡರು.
Related Articles
Advertisement
122ರ ವೀರ ಪಳನಿ: 3 ಗಂಟೆಗೆ ಕಲಾಪ ಸೇರುವ ಮೊದಲೇ ಡಿಎಂಕೆಯ ಎಲ್ಲ ಶಾಸಕರನ್ನೂ ಬಲವಂತವಾಗಿ ಹೊರಗೆ ಕಳುಹಿಸಲಾಯಿತು. ಅನಂತರ ಸಿಎಂಗೆ ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸಲಾಯಿತು. ಗೊಂದಲ, ಗಲಾಟೆಗಳ ನಡುವೆ ನಡೆದ ಅಗ್ನಿಪರೀಕ್ಷೆಯಲ್ಲಿ ಪಳನಿಸ್ವಾಮಿ ಅವರು ಬರೋಬ್ಬರಿ 122 ಶಾಸಕರ ಬೆಂಬಲದೊಂದಿಗೆ ಗೆದ್ದರು. ಪನ್ನೀರ್ ಸೆಲ್ವಂ ಪರವಾಗಿದ್ದ 11 ಶಾಸಕರು ಸರಕಾರದ ವಿರುದ್ಧ ಮತ ಚಲಾಯಿಸಿದರು. ಪಳನಿ ಬಣ ಯುದ್ಧ ಗೆದ್ದ ಸಂತಸದಲ್ಲಿ ಬೀಗುತ್ತಾ ಹೊರಬಂದರೆ, ಪನ್ನೀರ್ ಬಣದಲ್ಲಿ ದುಃಖ ಮಡುಗಟ್ಟಿತ್ತು. ಇದೇ ವೇಳೆ, ಅಸೆಂಬ್ಲಿಯೊಳಗಿನ ಘಟನೆ ಬಗ್ಗೆ ಪ್ರಶ್ನಿಸಿದಾಗ ಸ್ಪೀಕರ್ ಧನ್‌ಪಾಲ್, “ನನ್ನ ಅಂಗಿಯನ್ನು ಎಳೆದು, ಹರಿಯಲಾಯಿತು. ನನ್ನ ಮೇಲಾದ ಹಲ್ಲೆ ಬಗ್ಗೆ ಹೇಳಿಕೊಳ್ಳಲು ನಾನೆಲ್ಲಿಗೆ ಹೋಗಬೇಕು? ಹೋಗಿ, ನನಗಾದ ಅವಮಾನದ ಬಗ್ಗೆ ಜನರಿಗೆ ತಿಳಿಸಿ’ ಎಂದು ಗುಡುಗಿದ್ದೂ ಕಂಡುಬಂತು.
ಸ್ಪೀಕರ್ ಬಟ್ಟೆ ಹರಿದರುಕಲಾಪ ಆರಂಭವಾಗುತ್ತಿದ್ದಂತೆಯೇ, ಪನ್ನೀರ್ ಸೆಲ್ವಂ ಪರ ಘೋಷಣೆ ಕೂಗಲು ಶುರು ಮಾಡಿದ ಡಿಎಂಕೆ ಮತ್ತು ಕಾಂಗ್ರೆಸ್ ಶಾಸಕರು, ಮತದಾನವನ್ನು ಮುಂದೂಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪೀಕರ್ ಧನಪಾಲ್ ಒಪ್ಪಿಗೆ ನೀಡಲಿಲ್ಲ. ಕೊನೆಗೆ, ರಹಸ್ಯ ಮತದಾನಕ್ಕೆ ಅವಕಾಶ ನೀಡುವಂತೆ ಮಾಡಿದ ಕೋರಿಕೆಯೂ ತಿರಸ್ಕರಿಸಲ್ಪಟ್ಟಿತು. ಅಷ್ಟರಲ್ಲೇ ಆಕ್ರೋಶಗೊಂಡ ಡಿಎಂಕೆ ಶಾಸಕರು ಸದನ ದಲ್ಲಿ ಕೋಲಾಹಲ ಎಬ್ಬಿಸಿದರು. ಕಲಾಪ ವನ್ನು 1 ಗಂಟೆಗೆ ಮುಂದೂಡಿ, ಅನಂತರ ಕಲಾಪ ಆರಂಭವಾದಾಗಲೂ ಇದೇ ಪರಿಸ್ಥಿತಿ ಮರುಕಳಿಸಿತು. ಒಂದು ಹಂತದಲ್ಲಿ ಸದನ ದಲ್ಲಿದ್ದ ಕುರ್ಚಿ, ಮೇಜುಗಳನ್ನು ಬಿಸಾಕಿ, ಕಾಗದಪತ್ರ ಹರಿದ ಶಾಸಕರು, ಸ್ಪೀಕರ್‌ಗೆ ಮುತ್ತಿಗೆ ಹಾಕಿದರು. ಸ್ಪೀಕರ್ ಧನಪಾಲ್‌ಅವರ ಬಟ್ಟೆ ಎಳೆದು, ಮೇಜನ್ನು ಮುರಿದು, ಮೈಕ್ ಅನ್ನು ಕಿತ್ತು ಬಿಸಾಕಿದರು. ಡಿಎಂಕೆಯ ಇಬ್ಬರು ಶಾಸಕರು, ಸ್ಪೀಕರ್ ಕುರ್ಚಿ ಯಲ್ಲಿ ಕುಳಿತು, ಗಹಗಹಿಸಿ ನಕ್ಕು ಸದನದ ಘನತೆಯನ್ನೇ ಅಣಕವಾಡಿದರು. ಪನ್ನೀರ್ ಸೆಲ್ವಂ ಮುಂದೇನು?
ಸೋತರೂ ಜನರ ಅನುಕಂಪದ ಅಲೆ ಇವರತ್ತ ಬೀಸುತ್ತಿದ್ದು, ಪನ್ನೀರ್ ನೇಪಥ್ಯಕ್ಕೆ ಸರಿಯುವ ಸಾಧ್ಯತೆಯಿಲ್ಲ
ಸದ್ಯಕ್ಕೆ ಶಾಸಕರು ಪಳನಿಸ್ವಾಮಿ ಬೆನ್ನಿಗೆ ನಿಂತಿದ್ದರೂ ಮುಂದಿನ ದಿನಗಳಲ್ಲಿ ಈ ಚಿತ್ರಣ ಬದಲಾಗಬಹುದು
ನಾನು ಜನರ ಬಳಿ ಹೋಗುತ್ತೇನೆ. ಅಮ್ಮನ ಸರಕಾರವನ್ನು ಅಧಿಕಾರಕ್ಕೆ ತರುತ್ತೇನೆ ಎಂದಿರುವುದು ಸೆಲ್ವಂರ ಹೊಸ ಲೆಕ್ಕಾಚಾರದ ಸುಳಿವು ನೀಡಿದೆ
ಇದು ಅವರಿಂದ ಸಾಧ್ಯವಾಗದೇ ಇದ್ದರೆ, ಅವರು ಬೇರೆ ಪಕ್ಷದಲ್ಲಿ ಆಶ್ರಯ ಪಡೆಯಬಹುದು ಪಳನಿಸ್ವಾಮಿ ಕಥೆಯೇನು ?
ಶಶಿಕಲಾ ಪರಿಸ್ಥಿತಿಗೆ ಕಟ್ಟುಬಿದ್ದು ಪಳನಿಯನ್ನು ಆಯ್ಕೆ ಮಾಡಿರುವ ಕಾರಣ ಸರಕಾರ ಹೀಗೇ ಉಳಿಯುತ್ತದೆ ಎನ್ನಲಾಗದು
ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಶಶಿಕಲಾ ಸಂಬಂಧಿಗಳು ಮುಂದೊಮ್ಮೆ ಪಳನಿಗೆ ಮುಳ್ಳಾಗಬಹುದು
ಗೌಂಡರ್ ಮತ್ತು ತೇವಾರ್ ಸಮು ದಾಯ ರಾಜಕೀಯವೂ ಪಳನಿಸ್ವಾಮಿಗೆ ತೊಂದರೆ ಉಂಟುಮಾಡಬಹುದು
ಶಶಿಕಲಾರ ಸೂಚನೆಯಂತೆ ಪಳನಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ, ಅಧಿಕಾರ ಕಳೆದುಕೊಳ್ಳಬಹುದು.