Advertisement

ಒತ್ತಡ ಹೇರುವವರ ಮೈತ್ರಿ ಬೇಡ: ಎಐಎಡಿಎಂಕೆ ; ಪಳನಿ ಸಿಎಂ ಅಭ್ಯರ್ಥಿ

12:58 AM Dec 29, 2020 | mahesh |

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಡ ಎಐಎಡಿಎಂಕೆಯ ಮುಖ್ಯಮಂತ್ರಿ ಅಭ್ಯರ್ಥಿ ಕೆ. ಪಳನಿಸ್ವಾಮಿ ಯವರೇ ಆಗಲಿದ್ದಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಪಕ್ಷದ ಮೇಲೆ ಒತ್ತಡ ಹೇರುವ ರಾಷ್ಟ್ರೀಯ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪವಿಲ್ಲ ಮತ್ತು ಚುನಾವಣೆ ಯಲ್ಲಿ ಗೆದ್ದರೆ ಬಿಜೆಪಿ ಜತೆಗೆ ಅಧಿಕಾರ ಹಂಚಿಕೆ ಮಾಡು ವುದಿಲ್ಲ ಎಂದು ಎಐಎ ಡಿ ಎಂಕೆ ರಾಜ್ಯಸಭಾ ಸದಸ್ಯ ಕೆ.ಪಿ. ಮುನಿಸ್ವಾಮಿ ಹೇಳಿದ್ದಾರೆ.

Advertisement

ಅಧಿಕಾರವನ್ನು ಬಯಸಿಬ ರುವ ಯಾವುದೇ ರಾಷ್ಟ್ರೀಯ ಪಕ್ಷ ಅಥವಾ ಪ್ರಾದೇಶಿಕ ಪಕ್ಷದ ಸಖ್ಯವೇ ಎಐಎಡಿಎಂಕೆಗೆ ಅಗತ್ಯವಿಲ್ಲ ಎಂದವರು ಹೇಳಿದ್ದಾರೆ. ಹೀಗಾಗಿ ದ್ರಾವಿಡ ರಾಜ್ಯದಲ್ಲಿ ಅಣ್ಣಾಡಿಎಂಕೆ ಮತ್ತು ಬಿಜೆಪಿ ನಡುವೆ ಚುನಾವಣ ಸಖ್ಯ ನಡೆಯಲಿದೆ ಎಂಬ ವದಂತಿಗಳ ಬಗ್ಗೆ ಪ್ರಶ್ನೆ ಎದ್ದಂತಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ರವಿವಾರವೇ ಆಡಳಿತ ಪಕ್ಷದ ಚುನಾವಣ ಪ್ರಚಾರಕ್ಕೆ ಚಾಲನೆಯೂ ಸಿಕ್ಕಿದೆ.

ಹೊಸ ಜಿಲ್ಲೆ ಉದ್ಘಾಟನೆ: ಚುನಾವಣೆಗೆ ಪೂರಕವಾಗಿ ಸೋಮವಾರ ಪಳ ನಿ ಸ್ವಾಮಿ ಯವರು ಮೈಲಾಡು ತುರೈ ಎಂಬ ಹೊಸ ಜಿಲ್ಲೆಯನ್ನು ಉದ್ಘಾಟಿಸಿದ್ದಾರೆ. ಸದ್ಯ ಇರುವ ನಾಗಪಟ್ಟಣಂ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯನ್ನು ರಚಿಸಲಾಗಿದೆ.

ಆಯೋಗಕ್ಕೆ ದೂರು: ಮತ್ತೂಂದು ಬೆಳವಣಿಗೆಯಲ್ಲಿ ರಾಜ್ಯ ಸರಕಾರ ನೀಡಲು ಮುಂದಾಗಿರುವ ಪೊಂಗಲ್‌ ಉಡುಗೊ ರೆಯ ಬಗ್ಗೆ ಡಿಎಂಕೆ ಆಕ್ಷೇಪ ಮಾಡಿದೆ. ಇದು ಅಧಿಕಾರದ ದುರುಪಯೋಗ ಎಂದು ತಮಿಳುನಾಡು ರಾಜ್ಯ ಚುನಾವಣ ಆಯೋಗಕ್ಕೆ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌.ಭಾರತಿ ದೂರು ನೀಡಿದ್ದಾರೆ. ಪೊಂಗಲ್‌ ಉಡುಗೊರೆ ಕಿಟ್‌ನಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ 2,500 ರೂ. ನಗದು, 1 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ ಮತ್ತು ಇತರ ಅಗತ್ಯ ವಸ್ತುಗಳು ಇರಲಿವೆ

Advertisement

Udayavani is now on Telegram. Click here to join our channel and stay updated with the latest news.

Next