Advertisement
ನಗರದ ತಳವಾರ ಕೇರಿಯ ಶ್ರೀ ರಾಂಪುರ ದುರ್ಗಮ್ಮದೇವಿ, ಬಾಣದಕೇರಿ ನಿಜಲಿಂಗಮ್ಮ ದೇವಿ, ಮ್ಯಾಸಕೇರಿಯ ಹುಲಿಗೆಮ್ಮ ದೇವಿ ಹಾಗೂ ಕೊಂಗಮ್ಮ ದೇವಿ, ಉಕ್ಕಡಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಫಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಧರ್ಮದಗುಡ್ಡಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು, ಗುಡ್ಡದ ಕೆಳಭಾಗದಲ್ಲಿರುವ ಬನ್ನಿಮರಕ್ಕೆ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಲ್ಲಕ್ಕಿ ಮೂಲಕ ಧರ್ಮದ ಗುಡ್ಡದಲ್ಲಿರುವ ಚೆನ್ನಬಸವೇಶ್ವರ ಹಾಗೂ ನಿಜಲಿಂಗಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಅಲ್ಲಿಂದ ಪಲ್ಲಕ್ಕಿ ಮಹೋತ್ಸವ ನಗರಕ್ಕೆ ಆಗಮಿಸಿ ಆಯಾ ದೇಗುಲಗಳಲ್ಲಿ ಸೇರಿ ಸಂಪನ್ನಗೊಂಡಿತು.
Related Articles
Advertisement
ಕುರುಗೋಡು: ಎಮ್ಮಿಗನೂರಿನ ಹಂಪಿ ಸಾವಿರ ಶ್ರೀ ಮಹಾಂತ ಶಿವಾಚಾರ್ಯ ಮಠದ ಮೂಲ ಗದ್ದುಗೆಗೆ ಶ್ರೀ ವಾವದೇವಾ ಶ್ರೀಗಳು ವಿಶೇಷ ಪೂಜೆಸಲ್ಲಿಸಿದರು. ನಂತರ ಮಾತನಾಡಿ, ಮಾನವ ಮೊದಲಿಗೆ ತನ್ನನ್ನು ತಾನು ಅರಿತು ಸಮಾಜಮುಖೀಯಾಗಿ ಕರ್ತವ್ಯ ನಿರ್ವಹಣೆ ಮಾಡಿದಲ್ಲಿ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ದಸರಾ ವಿಜಯದ ಸಂಕೇತವಾಗಿದೆ. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಮಾಡುವ ರೀತಿ ಮನುಷ್ಯ ದಾನವ ಗುಣಗಳನ್ನು ತೊರೆದು, ಮಾನವ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ಮುಖ್ಯವಾಗಿ ತಾಯಿ ತಂದೆಯರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಭಕ್ತಿಯಿಲ್ಲದಿದ್ದರೆ ಜೀವನದುದ್ದಗಲಕ್ಕೂ ಸಂಭ್ರಮದ ಆಚರಣೆಗಳು ಕಾಣಲು ಸಾಧ್ಯವಿಲ್ಲ ಎಂದರು. ಗ್ರಾಮದ ಆರಾಧ್ಯ ದೇವರು ಶ್ರೀ ಜಡೇಶಿದ್ದೇಶಿವಯೋಗಿಗಳ ದೇವರ ಮೂರ್ತಿಗೆ ಬೆಳ್ಳಿ ಕವಚ ಅಲಂಕಾರ ಮಾಡಲಾಗಿತ್ತು.