Advertisement

ದಸರಾ ಅಂಗವಾಗಿ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ

12:37 PM Oct 20, 2018 | |

ಮಹದೇವಪುರ: ವಿಜಯದಶಮಿ ಅಂಗವಾಗಿ ಕಾಡುಗುಡಿಯ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಗಳನ್ನು ಅಂಬೇಡ್ಕರ್‌ ನಗರದ ದಸರಾ ಮೈದಾನದಲ್ಲಿ ಕೂರಿಸುವ ಮೂಲಕ ನಾಡಹಬ್ಬವನ್ನು ವಿಜೃಂಭಣೆಯಿಂದ ಅಚರಿಸಲಾಯಿತು.

Advertisement

ಕಾಡುಗುಡಿ ಸುತ್ತಲಿನ ನಾಗೊಂಡನಹಳ್ಳಿ, ನಲ್ಲೂರಹಳ್ಳಿ, ಪಟ್ಟಂದೂರು ಅಗ್ರಹಾರ, ವೈಟ್‌ಫೀಲ್ಡ್‌, ಬೆಳತ್ತೂರು, ಎ.ಕೆ.ಜಿ ಕಾಲೋನಿ, ಇಮ್ಮಡಿಹಳ್ಳಿ ಮತ್ತಿತರ ಗ್ರಾಮಗಳಿಂದ ಅಂಜನೇಯ, ಬಸವೇಶ್ವರ, ಶನೇಶ್ವರ, ಯಲ್ಲಮ್ಮ, ಸಪ್ಪಲಮ್ಮ, ಮುನೇಶ್ವರ, ಮಾರಮ್ಮ ಹಾಗೂ ವಿವಿಧ ದೇವರ ಪಲ್ಲಕಿಗಳು ಸೇರಿದ್ದವು. ಡೊಳ್ಳುಕುಣಿತ, ಗೊಂಬೆಗಳ ಕುಣಿತ, ವೀರಗಾಸೆ, ಕತ್ತಿವರಸೆ, ಕೀಲು ಕುದರೆ, ಕಂಸಾಳೆ ನೃತ್ಯ ಸಾರ್ವಜನಿಕರನ್ನು ಅಕರ್ಷಿಸಿದವು.

ಶಾಸಕ ಅರವಿಂದ ಲಿಂಬಾವಳಿ, ಕ್ಷೇತ್ರದ ಜನತೆಗೆ ಹಬ್ಬದ ಶುಭಾಷಯ ಕೋರಿದರು. ಈ ವೇಳೆ ಪಾಲಿಕೆ ಸದಸ್ಯ ಎಸ್‌.ಮುನಿಸ್ವಾಮಿ, ಮುಖಂಡರಾದ ಅಶ್ವತ್ಥನಾರಾಯಣ ರೆಡ್ಡಿ, ಹೂಡಿ ಪಿಳ್ಳಪ್ಪ, ಸಿ.ಎ.ಚಂದ್ರಶೇಖರ್‌, ಮಾರಪ್ಪ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next