Advertisement
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು . ಪಾಲಕ್ ಸೊಪ್ಪಿನಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು ಅದರಲ್ಲಿ ಪಾಲಾಕ್ ಪನ್ನೀರ್ ಕೂಡ ಒಂದಾಗಿದೆ.
ಪಾಲಕ್ 1ಕಟ್ಟು , ಪನ್ನೀರ್ 1 ಕಪ್, ಈರುಳ್ಳಿ 2 , ಬೆಳ್ಳುಳ್ಳಿ 2 ಕಟ್ ಮಾಡಿದ ಎಳೆ, ಶುಂಠಿ ಸ್ವಲ್ಪ , ಗರಂ ಮಸಾಲ 1 ಚಮಚ, ಎಣ್ಣೆ 5 ರಿಂದ 6 ಚಮಚ, ತುಪ್ಪ 4 ಚಮಚ, ಖಾರದ ಪುಡಿ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
Related Articles
ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ನೀರು ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಿರಿ. ಪಾಲಕ್ ಬೆಂದ ಮೇಲೆ ಅದನ್ನು ಪಾತ್ರೆಗೆ ಹಾಕಿ. ತಣ್ಣಗೆ ಅಗಲು ಬಿಡಿ. ಪಾಲಕ್ ತಣ್ಣಗಾದ ಮೇಲೆ ಅದನ್ನು ಮಿಕ್ಸ್‌ರ್ ನಲ್ಲಿ ಹಾಕಿ, ಸ್ವಲ್ಪ ಹೊತ್ತು ರುಬ್ಬಿರಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸ್ವಲ್ಪ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಈರುಳ್ಳಿ ಹಾಕಿ ಸ್ವಲ್ಪ ಕೆಂಪಾಗಲು ಬಿಡಿ. ನಂತರ ಅದಕ್ಕೆ ಒಂದೆರಡು ಚಮಚ ಗರಂ ಮಸಾಲ ಪುಡಿಯನ್ನು ಹಾಕಿ ಸ್ವಲ್ಪ ಕುದಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಮಿಕ್ಸ್‌ರ್ ನಲ್ಲಿ ರುಬ್ಬಿದ ಪಾಲಕ್ ಅನ್ನು ಇದರಲ್ಲಿ ಸೇರಿಸಿರಿ. ತದನಂತರ ಬೇರೆ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಆಮೇಲೆ ಖಾರದ ಪುಡಿಯನ್ನು ಬೆರೆಸಿರಿ. ಅದು ಕಾದ ನಂತರ ಅದನ್ನು ಪಾಲಕ್ ನಲ್ಲಿ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದೆಲ್ಲವನ್ನು ಚೆನ್ನಾಗಿ ಬೇಯಿಸಿದ ನಂತರ ಸ್ವಲ್ಪ ತಣ್ಣಗಾದ ಮೇಲೆ ಅದಕ್ಕೆ ಕಟ್ ಮಾಡಿಟ್ಟ ಪಾನ್ನೀರ್ ನ್ನು ಬೆರೆಸಿ, 5 ನಿಮಿಷಗಳ ಕಾಲ ಹಾಗೇ ಬಿಡಿ. ಬಿಸಿ-ಬಿಸಿಯಾದ ರುಚಿಕರವಾದ ಪಾಲಕ್ ಪನ್ನೀರ್ ಮಸಾಲ ಸವಿಯಲು ಸಿದ್ಧ. ಇದು ಚಪಾತಿ ಹಾಗೂ ರೋಟಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.
Advertisement