Advertisement
ಫಲಾಪೆಲ್ ಇದು ಮಧ್ಯಪ್ರಾಚೀನ ಯುಗದ ಜನರ ನೆಚ್ಚಿನ ತಿನಿಸಾಗಿದ್ದು ಇಸ್ರೇಲ್‌ನ ರಾಷ್ಟ್ರೀಯ ಖಾದ್ಯ ಎಂಬ ಹೆಗ್ಗಳಿಕೆ ಇದಕ್ಕಿದೆ. ಉಪವಾಸದ ಅವಧಿಯಲ್ಲಿ ಶಾಕಾಹಾರ ಸೇವಿಸಲು ಇಷ್ಟಪಡದವರಿಗೆ ಈ ತಿನಿಸು ಬಲು ಇಷ್ಟವಂತೆ. ಇದನ್ನು ತಯಾರಿಸುವಾಗ ವಿವಿಧ ಪೋಷಕಾಂಶವುಳ್ಳ ಆಹಾರವನ್ನು ಸೇರ್ಪಡಿಸುವುದರಿಂದ ಸೇವನೆಯು ಬಹಳ ಉಪಯುಕ್ತವಾಗಿದೆ.
ಚನ್ನಾ ಕಡಲೆ (8ಗಂಟೆ ನೆನೆಹಾಕಿರಬೇಕು)- 1 ಕಪ್
ಜೀರಿಗೆ ಪುಡಿ- 1 ಚಮಚ
ಕಾಳು ಮೆಣಸಿನ ಪುಡಿ -1 ಚಮಚ
ಕೊತ್ತ¤ಂಬರಿಸೊಪ್ಪು-ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – 1-2
ಬೆಳ್ಳುಳ್ಳಿ- 7 ಎಸಲು
ಹಸಿಮೆಣಸು -2
ಕಡ್ಲೆ ಹಿಟ್ಟು- ಅರ್ಧ ಕಪ್
ಖಾರದ ಪುಡಿ – 1 ಚಮಚ
ಆಲಿವ್ ಎಣ್ಣೆ -ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು ಮಾಡುವ ವಿಧಾನ
ಒಂದು ಕಪ್ ನೆನೆಹಾಕಿದ ಚನ್ನಾಕಡಲೆ, ಹೆಚ್ಚಿದ ಈರುಳ್ಳಿ, ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ- ಹಸಿಮೆಣಸು, ಖಾರದ ಪುಡಿ, ಜೀರಿಗೆ, ಕರಿಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ಡ್ರೈ ಪೇಸ್ಟ್ ಮಾಡಬೇಕು. ಬಳಿಕ ಅದೇ ಪೇಸ್ಟ್‌ಗೆ ಕಡಲೆ ಹಿಟ್ಟನ್ನು ಹಾಕಿ ಪುನಃ ಮಿಕ್ಸಿಯಲ್ಲಿ ಡ್ರೈ ಪೇಸ್ಟ್ ಮಾಡಿಟ್ಟು ಕೊಳ್ಳಿ (ನೀರನ್ನು ಹೆಚ್ಚಾಗಿ ಬೆರೆಸಬಾರದು). ಡ್ರೈ ಪೇಸ್ಟ್ ಹಿಟ್ಟು ಮೃದುವಾಗಿದ್ದರೆ ಅದಕ್ಕೆ ಕಡಲೆ ಹಿಟ್ಟನ್ನು ಬೆರೆಸಿ ಉಂಡೆ ಆಕಾರಗೊಳಿಸಿ. ಬಳಿಕ ಓವನ್‌ನಲ್ಲಿ 15 ನಿಮಿಷ ಬೇಯಿಸಿ. ಹೊರತೆಗೆದು ಆಲಿವ್ ಎಣ್ಣೆ ಪಾಲಿಶ್ ಮಾಡಿ ಪುನಃ ಹತ್ತು ನಿಮಿಷ ಬೇಯಿಸಬೇಕು. ಚಟ್ನಿ, ಸಾಸ್ ಜತೆ ರುಚಿ ರುಚಿಯಾದ ಫಲಾಪೆಲ್ ಸವಿಯಲು ಸಿದ್ಧವಾಗುತ್ತದೆ.
Related Articles
Advertisement