Advertisement

ಪಾಲಾ ಉಪಚುನಾವಣೆ: ಮಾಣಿ ಸಿ.ಕಾಪನ್‌ಗೆ ಐತಿಹಾಸಿಕ ಗೆಲುವು

12:04 AM Sep 28, 2019 | Sriram |

ಕಾಸರಗೋಡು: ಕುತೂಹಲಕ್ಕೆ ಕಾರಣವಾಗಿದ್ದ ಕೋಟ್ಟಯಂ ಜಿಲ್ಲೆಯ ಪಾಲಾ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ಎನ್‌.ಸಿ.ಪಿ. ಅಭ್ಯರ್ಥಿ ಮಾಣಿ ಸಿ.ಕಾಪನ್‌ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

Advertisement

ಕೇರಳ ಕಾಂಗ್ರೆಸ್‌(ಎಂ)ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಅಚ್ಚರಿಯ ಗೆಲುವು ಸಾಧಿಸುವ ಮೂಲಕ ಕೇರಳ ಕಾಂಗ್ರೆಸ್‌(ಎಂ)ಗೆ ಹೊಡೆತ ನೀಡಿದ್ದಾರೆ.

ಮತ ಎಣೆಕೆಯ ಪ್ರಥಮ ಸುತ್ತಿನಿಂದಲೇ ಮುನ್ನಡೆಯನ್ನು ಕಾಯ್ದುಕೊಂಡ ಮಾಣಿ ಸಿ.ಕಾಪನ್‌ ಅಂತಿಮ ಮತ ಎಣಿಕೆಯ ವರೆಗೂ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಿಂದ ಯುಡಿಎಫ್‌ನ ಭದ್ರ ಹಾಗು ಅಭೇದ್ಯ ಕೋಟೆಯಾಗಿತ್ತು. ಕೇರಳ ಕಾಂಗ್ರೆಸ್‌(ಎಂ)ನ ಕೆ.ಎಂ.ಮಾಣಿ ಅವರು ಇಲ್ಲಿ ಸತತ ಐವತ್ತು ವರ್ಷಗಳಿಂದ ಸೋಲಿಲ್ಲದ ಸರದಾರನಾಗಿ ಗೆಲ್ಲುತ್ತಾ ಬಂದಿದ್ದರು. ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿದ್ದು, ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.ಉಪಚುನಾವಣೆಯಲ್ಲಿ ಐಕ್ಯರಂಗದ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲುಗೊಳಿಸಿ ಎಡರಂಗ ಐತಿಹಾಸಿಕ ಗೆಲುವು ಸಾಧಿಸಿದೆ.

2016ರಲ್ಲಿ ನಡೆದ ವಿಧಾನಸಭಾ ಚುನಾವಣೆ ಯಲ್ಲಿ ಒಟ್ಟು 1,80,091 ಮತಗಳ ಪೈಕಿ 1,39,775 ಮತಗಳು ಚಲಾಯಿಸಲ್ಪಟ್ಟಿತ್ತು. ಅದರಲ್ಲಿ ಐÂಕರಂಗದ ಕೆ.ಎಂ.ಮಾಣಿ 58,884 ಮತಗಳನ್ನು ಪಡೆದಿದ್ದರು. ಎಡರಂಗದ ಮಾಣಿ ಸಿ.ಕಾಪನ್‌ ಅವರಿಗೆ 54,181 ಮತಗಳು ಲಭಿಸಿದ್ದವು. ಬಿಜೆಪಿಯ ಎನ್‌.ಹರಿ ಅವರು 24,821 ಮತಗಳನ್ನು ಪಡೆದಿದ್ದರು. ಅಂದು ಕೆ.ಎಂ.ಮಾಣಿ 4,703 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2019ರಲ್ಲಿ ನಡೆದ ಲೋಕಸಭಾ ಚುನಾವಣೆ ಯಲ್ಲಿ ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,77,550 ಮತಗಳ ಪೈಕಿ 1,29,037 ಮತಗಳು ಚಲಾಯಿಸಲ್ಪಟ್ಟಿತ್ತು. ಯುಡಿಎಫ್ನ ಥೋಮಸ್‌ ಚಾಳಕಾಡನ್‌ ಅವರಿಗೆ 66,971 ಮತಗಳು ಲಭಿಸಿದ್ದರೆ, ಎಡರಂಗದ ಪಿ.ಎಸ್‌.ವಾಸವನ್‌ ಅವರಿಗೆ 33,499 ಮತಗಳು ಲಭಿಸಿತ್ತು. ಎನ್‌ಡಿಎಯ ಪಿ.ಸಿ. ಥೋಮಸ್‌ ಅವರಿಗೆ 26,533 ಮತಗಳು ಲಭಿಸಿತ್ತು.

Advertisement

2,943 ಮತಗಳ ಅಂತರ
ಎಡರಂಗದ ಎನ್‌.ಸಿ.ಪಿ. ಅಭ್ಯರ್ಥಿ ಮಾಣಿ ಸಿ. ಕಾಪನ್‌ 54,137 ಮತಗಳನ್ನು ಪಡೆದರೆ, ಐಕ್ಯರಂಗದ ಕೇರಳ ಕಾಂಗ್ರೆಸ್‌(ಎಂ) ಅಭ್ಯರ್ಥಿ ಜೋಸ್‌ ಟೋಮ್‌ 51,194 ಮತಗಳನ್ನು ಪಡೆದುಕೊಂಡಿದ್ದಾರೆ. ಎನ್‌ಡಿಎಯ ಅಭ್ಯರ್ಥಿ ಬಿಜೆಪಿಯ ಎನ್‌.ಹರಿ 18,044 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮಾಣಿ ಸಿ.ಕಾಪನ್‌ 2,943 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next