Advertisement
ಶುಕ್ರವಾರ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು. ಆದರೆ ಭದ್ರತಾ ಭೀತಿಯ ಕಾರಣದಿಂದ ನ್ಯೂಜಿಲ್ಯಾಂಡ್ ಆಟಗಾರರು ಮೈದಾನಕ್ಕೆ ಆಗಮಿಸದೆ ಹೋಟೆಲ್ ರೂಮ್ ನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
Related Articles
Advertisement
18 ವರ್ಷಗಳ ಬಳಿಕ ಪ್ರವಾಸ: ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಪಾಕ್ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಲು ಪ್ರವಾಸ ಕೈಗೊಂಡಿತ್ತಿ. 2003ರಲ್ಲಿ ಇತ್ತಂಡಗಳ ನಡುವೆ ಇಲ್ಲಿ ಕೊನೆಯ ಪಂದ್ಯ ನಡೆದಿತ್ತು. ಆದರೆ ಈ ಪ್ರವಾಸ ಯಾವುದೇ ಪಂದ್ಯಗಳಿಲ್ಲದೆ ಆರಂಭಕ್ಕೂ ಮೊದಲೇ ಅಂತ್ಯವಾಗಿದೆ.
ಈ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಿಗದಿಯಾಗಿತ್ತು. ಸೆ.17ರಿಂದ ಅ.3ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್ ನಲ್ಲಿ ಈ ಸರಣಿ ನಡೆಯಲಿತ್ತು.