ಲಹೋರ್ : ಈ ವರ್ಷ ಜನವರಿಯಿಂದ ಗೃಹ ಬಂಧನದಲ್ಲಿರುವ ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದಾವಾ ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥ, ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡುವಂತೆ ಪಾಕ್ ಪಂಜಾಬ್ ಪ್ರಾಂತ್ಯದ ನ್ಯಾಯಾಂಗ ಪರಾಮರ್ಶೆ ಮಂಡಳಿ ಆದೇಶಿಸಿದೆ.
ಸಯೀದ್‌ನ ಗೃಹ ಬಂಧನವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕೆಂಬ ಸರಕಾರದ ಮನವಿಯನ್ನು ಮಂಡಳಿಯು ತಿರಸ್ಕರಿಸಿ ಸಯೀದ್‌ನ ಬಿಡುಗಡೆಗೆ ಆದೇಶಿಸಿತು.
“ಹಫೀಜ್ ಸಯೀದ್ ಬೇರೆ ಯಾವುದೇ ಕೇಸಿನಲ್ಲಿ ಬೇಕಾಗಿಲ್ಲವಾದರೆ ಆತನನ್ನು ಗೃಹಬಂಧನದಿಂದ ಬಿಡುಗಡೆ ಮಾಡಬೇಕು’ ಎಂದು ಮಂಡಳಿಯು ಸರಕಾರಕ್ಕೆ ಆದೇಶಿಸಿತು.
ಕಳೆದ ತಿಂಗಳಲ್ಲಿ ಮಂಡಳಿಯು ಸಯೀದ್‌ನ ಗೃಹಬಂಧನವನ್ನು ಇನ್ನೂ 30 ದಿನಗಳಿಗೆ ವಿಸ್ತರಿಸಬೇಕೆಂಬ ಸರಕಾರದ ಮನವಿಯನ್ನು ಪುರಸ್ಕರಿಸಿತ್ತು. ಆ 30 ದಿನಗಳ ಅವಧಿಯು ಮುಂದಿನ ವಾರ ಕೊನೆಗೊಳ್ಳಲಿದೆ.
1997ರ ಉಗ್ರ ನಿಗ್ರಹ ಕಾಯಿದೆ ಮತ್ತು ಈ ಕಾಯಿದೆ 4ನೇ Schedule ಪ್ರಕಾರ ಈ ವರ್ಷ ಜನವರಿ 31ರಂದು ಸಯೀದ್ ಮತ್ತು ಆತನ ನಾಲ್ವರು ಸಹಚರರಾದ ಅಬ್ದುಲ್ಲಾ ಉಬೇದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಮತ್ತು ಕಾಜಿ ಕಾಶಿಫ್ ಹುಸೇನ್ ಅವರನ್ನು ಪಂಜಾಮ್ ಸರಕಾರ 90 ದಿನಗಳ ಅವಧಿಗೆ ಬಂಧಿಸಿತ್ತು.
ಸಯೀದ್ ಅವರ ನಾಲ್ವರು ಸಹಚರರನ್ನು ಕಳೆದ ಅಕ್ಟೋಬರ್ ಅಂತ್ಯಕ್ಕೆ ಬಂಧಮುಕ್ತ ಗೊಳಿಸಲಾಗಿತ್ತು.
ಅಮೆರಿಕ ಈ ಹಿಂದೆಯೇ ಉಗ್ರ ಸಯೀದ್‌ನ ತಲೆಗೆ 10 ಲಕ್ಷ ಡಾಲರ್ ಇನಾಮು ಘೋಷಿಸಿದೆ. ಸಯೀದ್‌ನ ಜೆಯುಡಿ ಉಗ್ರ ಸಂಘಟನೆಯು ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಮುಂಚೂಣಿ ಸಂಸ್ಥೆಯಾಗಿದೆ. ಇದುವೇ 2008ರಲ್ಲಿ ಮುಂಬಯಿ ಉಗ್ರ ದಾಳಿ ನಡೆಸಿತ್ತು.