Advertisement

4 ಸಾವಿರ ಉಗ್ರರಿಗೆ ಒಳ್ಳೆಯವರ ಪಟ್ಟ !

01:03 AM Sep 29, 2020 | mahesh |

ಹೊಸದಿಲ್ಲಿ: ಜಗತ್ತು ಕೊರೊನಾ ಕರಾಳತೆಗೆ ಸಿಲುಕಿ ನರಳುತ್ತಿದ್ದರೆ ಪಾಕಿಸ್ಥಾನ ಮಾತ್ರ ತಾನೇ ಸಾಕಿ ಬೆಳೆಸಿದ ಉಗ್ರರಿಗೆ “ಒಳ್ಳೆಯವರ’ ಪಟ್ಟ ಕಟ್ಟುವುದರಲ್ಲಿ ನಿರತವಾಗಿತ್ತು!

Advertisement

ಇದು ವಿಶ್ವದ ಮುಂದೆ ಭಾರತ ಬಯಲು ಮಾಡಿದ ಪಾಕ್‌ ಬಗೆಗಿನ ಕರಾಳ ಸತ್ಯ. ವಿಶ್ವಸಂಸ್ಥೆಯಲ್ಲಿರುವ ಫ‌ಸ್ಟ್‌ ಸೆಕ್ರೆಟರಿ ಪವನ್‌ ಬಢೆ ಅವರು ಪಾಕಿಸ್ಥಾನದ ಬೆವರಿಳಿಸಿದ್ದಾರೆ. ಕೊರೊನಾ ಸೋಂಕಿನ ಕಾಲದಲ್ಲಿ ಇಡೀ ಜಗತ್ತು ಇದರಿಂದ ಪಾರಾಗುವ ಬಗ್ಗೆ ಚಿಂತನೆ ನಡೆಸುತ್ತಿತ್ತು. ಆದರೆ ಪಾಕ್‌ ಮಾತ್ರ ತನ್ನಲ್ಲಿರುವ ಉಗ್ರರ ಸಂಖ್ಯೆಯನ್ನು ಕುತಂತ್ರದಿಂದ ಕಡಿಮೆ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಅದು ಸುಮಾರು 4 ಸಾವಿರ ಉಗ್ರರನ್ನು “ಭಯೋತ್ಪಾದಕರ ಪಟ್ಟಿ’ಯಿಂದ ತೆಗೆದುಹಾಕಿದೆ ಎಂದು ಪವನ್‌ ಹೇಳಿದ್ದಾರೆ.

ಇಡೀ ಜಗತ್ತಿಗೇ ಪಾಕ್‌ನ ಉಗ್ರ ವಾತ್ಸಲ್ಯದ ಬಗ್ಗೆ ಅರಿವಿದೆ. ಹೀಗಾಗಿಯೇ ಎಫ್ಎಟಿಎಫ್ನಲ್ಲಿ ದೇಶ ವನ್ನು ಕಪ್ಪುಪಟ್ಟಿಗೆ ಸೇರಿಸಿಬಿಟ್ಟರೆ ಎಂಬ ಆತಂಕ ಪಾಕ್‌ ನಾಯಕರಿಗೆ ಇದೆ. ಅಕ್ಟೋಬರ್‌ನಲ್ಲಿ ಎಫ್ಎಟಿಎಫ್ ಸಭೆ ನಡೆಯಲಿದ್ದು, ಇಂಥ ಭಯದಲ್ಲಿ ಯಾರಿಗೂ ಅರಿವು ಬಾರದಂತೆ ಪಾಕ್‌ ತನ್ನಲ್ಲಿರುವ ಉಗ್ರರ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಬಢೆ ಆರೋಪಿಸಿದ್ದಾರೆ.

ಪಿಒಕೆ ಪರಿಸ್ಥಿತಿ ಬದಲಾವಣೆ
ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಪಾಕ್‌ ಕಿರುಕುಳ ಇನ್ನಷ್ಟು ಹೆಚ್ಚಾಗಿದೆ. ಅಲ್ಲಿರುವ ಸ್ಥಳೀಯರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪ್ರತೀ ನಾಲ್ವರಲ್ಲಿ ಒಬ್ಬರು ಮಾತ್ರ ಸ್ಥಳೀಯರಿದ್ದಾರೆ. ಬೇರೆ ಕಡೆಯಿಂದ ಅಲ್ಲಿಗೆ ಜನರನ್ನು ಕರೆತರಲಾಗುತ್ತಿದೆ.

ಭಾರತದಲ್ಲಿರುವ ಅಲ್ಪಸಂಖ್ಯಾಕರ ಬಗ್ಗೆ ಮಾತನಾಡುವುದಕ್ಕೆ ಮುನ್ನ ಪಾಕ್‌ ತನ್ನಲ್ಲಿರುವ ಅಲ್ಪಸಂಖ್ಯಾಕರ ಸ್ಥಿತಿಗತಿಯೇನು ಎಂಬುದನ್ನು ಅರಿತುಕೊಳ್ಳಬೇಕು. ಪಾಕ್‌ನಲ್ಲಿ ಅಹಮದೀಯರು, ಕ್ರೈಸ್ತರು, ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಪವನ್‌ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next