Advertisement
ಗುರೂಜಿ ಎಂ.ಎಸ್.ಗೋಳ್ವಾಲ್ಕರ್ ಅವರ 112ನೇ ದಿನಾಚರಣೆಯ ಅಂಗವಾಗಿ ಮಂಥನ ಬೆಂಗಳೂರು ಸಂಸ್ಥೆಯು ಜೆ.ಪಿ.ನಗರದ ಆರ್‌ವಿ ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ “ಸಮಗ್ರತೆ ಚಿಂತನೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
Related Articles
Advertisement
ಗೋಳ್ವಾಲ್ಕರ್ ಗುಣಗಾನ: ಆರ್‌ಎಸ್‌ಎಸ್ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಗೋಳ್ವಾಲ್ಕರ್ ಅವರ ಸಾಧನೆಯ ಗುಣಗಾನ ಮಾಡಿದ ರಾಮ್ ಮಾಧವ್, ಗಾಂಧೀಜಿ ಅವರ ಹತ್ಯೆಯ ವೇಳೆ ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎಂಬ ಒತ್ತಾಯವಿತ್ತು. ಇದರ ವಿರುದಟಛಿ ಗೋಳ್ವಾಲ್ಕರ್ ದನಿ ಎತ್ತಿದರು. ಆರ್‌ಎಸ್ ಎಸ್ ಶಾಖೆಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಈ ಹಿಂದೆ ಉತ್ತರ ಪ್ರದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂಸಿಂಗ್ ಯಾದವ್, ಆರ್‌ಎಸ್‌ಎಸ್‌ನವರು ಹಿಂದೂಗಳು ಅಲ್ಲ. ನಾವೇ ನಿಜವಾದ ಹಿಂದೂ ಎಂದಿದ್ದರು. ಇದೆಲ್ಲವೂ ಚುನಾವಣಾ ಗಿಮಿಕ್. ಆರ್‌ಎಸ್‌ಎಸ್ ಒಂದು ಧರ್ಮ, ಒಂದು ಜಾತಿಗೆ ಸಿಮೀತವಾಗಿಲ್ಲ. ಎಲ್ಲಾ ಧರ್ಮೀಯರನ್ನು ಒಳಗೊಂಡಿದೆ ಎಂದರು.
ರಾಹುಲ್ ಆರೋಪಗಳಿಗೆಉತ್ತರ ನೀಡುವುದಿಲ್ಲ
ಜೈಲಿಗೆ ಹೋಗಿ ಬಂದವರು ಇದೀಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್
ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಮ್ ಮಾಧವ್, ರಾಹುಲ್ ಗಾಂಧಿ ಮಾತುಗಳಿಗೆ ತಿರುಗೇಟು
ನೀಡುವ ಶಕ್ತಿ ರಾಜ್ಯ ಬಿಜೆಪಿ ಮುಖಂಡರಿಗೆ ಇದೆ ಎಂದರು.