ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಅಧ್ಯಕ್ಷ ಡಾ. ಆರಿಫ್ ಅಲ್ವಿ (69)ವೃತ್ತಿಯಿಂದ ದಂತ ವೈದ್ಯರು. ಅವರಿಗೆ ಪರೋಕ್ಷವಾಗಿ ಭಾರತದ ಸಂಬಂಧವೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಅವರ ತಂದೆ ಡಾ. ಹಬೀಬ್ ಉರ್ ರೆಹಮಾನ್ ಇಲಾಹಿ ಅಲ್ವಿ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂಗೆ ದಂತ ವೈದ್ಯರಾಗಿದ್ದರು. ದೇಶ ವಿಭಜನೆಗೊಂಡ ಬಳಿಕ ಅಲ್ವಿ ಅವರ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಿತ್ತು. ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ಡಾ.ಅಲ್ವಿ ಅವರ ಆತ್ಮಕತೆಯ ಒಂದು ಭಾಗದಲ್ಲಿ ಅದನ್ನು ಈ ಅಂಶ ಪ್ರಸ್ತಾಪವಾಗಿದೆ. “ಡಾ.ಎಲಾಹಿ ಅಲ್ವಿ ಜವಾಹರ್‌ಲಾಲ್ ನೆಹರೂಗೆ ದಂತ ವೈದ್ಯರಾಗಿದ್ದರು. ಅವರಿಗೆ ನೆಹರೂ ಬರೆಯುತ್ತಿದ್ದ ಪತ್ರಗಳು ಈಗಲೂ ಕುಟುಂಬದ ಬಳಿ ಭದ್ರವಾಗಿವೆ’ ಎಂದು ಉಲ್ಲೇಖೀಸಲಾಗಿದೆ. ಪಾಕಿಸ್ತಾನದ ಹಾಲಿ ಅದ್ಯಕ್ಷ ಮಮೂ°ನ್ ಹುಸೇನ್‌ರ ಪೂರ್ವಜರು ಆಗ್ರಾದಿಂದ, ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರ್ರೀಫ್ ಕುಟುಂಬ ನವದೆಹಲಿಯಿಂದ ಪಾಕ್‌ಗೆ ವಲಸೆ ಹೋಗಿತ್ತು.