Advertisement
ಕಣಿವೆಯಲ್ಲಿ ಅಟ್ಟಹಾಸಗೈಯ್ಯುತ್ತಿರುವ ಉಗ್ರರಿಗೆ ಪಾಕಿಸ್ಥಾನದ ಐಎಸ್‌ಐ ಕಳುಹಿಸಿ ಕೊಟ್ಟಿರುವ “22 ಅಂಶಗಳ ಕಾರ್ಯ ಸೂಚಿ’ ಯನ್ನು ಭಾರತೀಯ ಗುಪ್ತಚರ ಸಂಸ್ಥೆ ಗಳು ಬಹಿರಂಗಪಡಿಸಿವೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ರಕ್ತದೋಕುಳಿ ಹರಿಸುವ ಐಎಸ್‌ಐ ಸಂಚು ಬಯಲಾಗಿದೆ.
ಜಮ್ಮು – ಕಾಶ್ಮೀರದಲ್ಲಿ ನೆಲೆಸುವ ಸ್ಥಳೀಯೇತರರಿಂದ ಮುಂದೆ ಆಗಬಹು ದಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಕಾರ್ಯಸೂಚಿಯಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಸ್ಥಳೀಯ ಸರಕಾರಿ ನೌಕರರ ಸ್ವಾತಂತ್ರ್ಯವನ್ನು ಕಸಿಯುವ ಮತ್ತು ಅವರ ಕೆಲಸಕ್ಕೆ ತೊಂದರೆಯಾಗುವಂಥ ಯಾವುದೇ ಆದೇಶ ಅಥವಾ ಸುತ್ತೋಲೆಗಳು ಬಂದರೂ ಅವೆರೆಲ್ಲರೂ ಅದಕ್ಕೆ ವಿರುದ್ಧ ಪ್ರತಿರೋಧ ಒಡ್ಡುವಂತೆ ಮಾಡಬೇಕು. ಕೇಂದ್ರಾಡಳಿತ ಪ್ರದೇಶದಲ್ಲಿ ಕ್ರೀಡಾ ಕಾರ್ಯಕ್ರಮ ಆಯೋಜಿಸಿದರೆ ಬಹಿಷ್ಕರಿಸಬೇಕು. ದ್ರೋಹ ಎಸಗುವವರನ್ನು ಪತ್ತೆಹಚ್ಚಬೇಕು ಎಂದು ತಿಳಿಸಲಾಗಿದೆ.
Related Articles
Advertisement
6 ಲಷ್ಕರ್ ಉಗ್ರರ ಹತ್ಯೆಜಮ್ಮು – ಕಾಶ್ಮೀರದ ರಜೌರಿ ವಲಯದ ಅರಣ್ಯದಲ್ಲಿ ಮಂಗಳವಾರ ಭದ್ರತ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಲಷ್ಕರ್-ಎ-ತೊಯ್ಬಾದ 6 ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದ 2-3 ತಿಂಗಳಲ್ಲಿ ಪಾಕ್‌ನಿಂದ ಭಾರತದೊಳಗೆ ನುಸುಳಿರುವ ಸುಮಾರು 10 ಲಷ್ಕರ್ ಉಗ್ರರು ರಜೌರಿ- ಪೂಂಛ… ಜಿಲ್ಲೆಗಳ ನಡುವೆ ಬರುವ ದಟ್ಟಾರಣ್ಯಗಳಲ್ಲಿ ಅವಿತಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತ ಪಡೆ ಕಾರ್ಯಾಚರಣೆ ನಡೆಸಿದ್ದು, ಇನ್ನಷ್ಟು ಉಗ್ರರಿಗಾಗಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಗ್ರ ನೀಲ ನಕಾಶೆ
ಐಎಸ್‌ಐ ರವಾನಿಸಿರುವ ಟೂಲ್‌ಕಿಟ್‌ನಲ್ಲಿ 22 ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಅನುಸರಿಸುವಂತೆ ಉಗ್ರರಿಗೆ ನಿರ್ದೇಶನ ನೀಡ ಲಾಗಿದೆ. ಸ್ಥಳೀಯೇತರ ಅಧಿಕಾರಿ ಗಳನ್ನು ಜಮ್ಮು- ಕಾಶ್ಮೀರದಲ್ಲಿ ಅಥವಾ ಅವರ ಊರಿಗೆ ಹೋಗಿ ಹತ್ಯೆ ಮಾಡುವಂತೆ ತಿಳಿಸ ಲಾಗಿದೆ. ಯಾವುದೇ ಇಲಾಖೆ, ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ರಲ್ಲದ ಪ್ರತೀ ಉದ್ಯೋಗಿ ಯನ್ನು ಗುರಿಯಾಗಿಸಿ ದಾಳಿ ನಡೆಸುವಂತೆ ಸೂಚಿಸಲಾಗಿದೆ. ಟೂಲ್‌ಕಿಟ್‌ನಲ್ಲಿ ಏನಿದೆ?
01ದೀರ್ಘಾವಧಿ ವಾಸವಿರ ಲೆಂದು ಕಣಿವೆಗೆ ಬರುವ ಅನ್ಯ ರಾಜ್ಯದವರನ್ನು ಹತ್ಯೆ ಮಾಡಿ.
02 90ರ ದಶಕಗಳಲ್ಲಿ ಕಾಶ್ಮೀರ ದಿಂದ ವಲಸೆ ಹೋಗಿ, ಈಗ ವಾಪಸಾಗಲು ಬಯಸುತ್ತಿರುವ ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆಸಿ.
03ಸ್ಥಳೀಯವಾಗಿ ಪೊಲೀಸರು, ಸೇನೆಗೆ ಮಾಹಿತಿದಾರರಾಗಿ ಕೆಲಸ ಮಾಡುವವರ ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆಯಿರಿ, ಕಲ್ಲುತೂರಾಟ ನಡೆಸಿ.
04ಕಾಶ್ಮೀರ ವಿರೋಧಿ ಹೋರಾಟ ದಲ್ಲಿ ಭಾಗಿ ಯಾಗಿ ರುವ ಜಮ್ಮು-ಕಾಶ್ಮೀರ ಪೊಲೀಸ್ ಸಿಬಂದಿ ಮನೆಗಳ ಮೇಲೆ ದಾಳಿ ನಡೆಸಿ.
05ಆಡಳಿತದೊಂದಿಗೆ ಕೈಜೋಡಿಸಿರುವ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರನ್ನು ಗುರಿ ಮಾಡಿ.
06ಆಡಳಿತದೊಂದಿಗೆ ಸಹಭಾಗಿತ್ವ ಹೊಂದಿರುವ ಎಲ್ಲ ಮಾಧ್ಯಮ ಸಂಸ್ಥೆಗಳನ್ನು ಬಹಿಷ್ಕರಿಸಿ.
07ಸರಕಾರಿ ಆಸ್ತಿಪಾಸ್ತಿ, ಅಭಿವೃದ್ಧಿ ಯೋಜನೆಗಳು, ಸೇತುವೆ, ಶಾಲೆ-ಕಾಲೇಜುಗಳು, ಕ್ರೀಡಾ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ