Advertisement

ಫ್ರಾನ್ಸ್‌, ಥಾಯ್ಲೆಂಡ್‌  ಸೇರಿ ಹಲವು ದೇಶಗಳಲ್ಲಿ ಐಎಸ್‌ಐ ಜಾಲ

09:16 AM Aug 24, 2020 | Nagendra Trasi |

ಬ್ಯಾಂಕಾಕ್‌: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಕರಾಳ ಹಸ್ತ ವಿಸ್ತರಿಸುತ್ತಿರುವುದು ಮತ್ತೆ ಸಾಬೀತಾಗಿದೆ. ಫ್ರಾನ್ಸ್‌, ಥಾಯ್ಲೆಂಡ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇರುವ ಅಪರಾಧ ಸಂಘಟನೆಗಳ ಮೂಲಕ ತನ್ನ ವಿಷ ಜಾಲ, ಅಜೆಂಡಾ ಹಬ್ಬಿಸಲು ಪ್ರಯತ್ನ ನಡೆಸಿದೆ. ಈ ಬಗ್ಗೆ “ಗ್ಲೋಬಲ್‌ ವಾಚ್‌ ಅನಾಲಿಸಿಸ್‌’ ಎಂಬ ಉಗ್ರರು ಮತ್ತು ಭಯೋತ್ಪಾದಕ ಚಟುವಟಿಕೆ ಗಳ ಮೇಲೆ ನಿಗಾ ಇರಿಸುವ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಥಾಯ್ಲೆಂಡ್‌ ಪೊಲೀಸರು ಇತ್ತೀಚೆಗೆ ಹಲವು ಅಪರಾಧ ಕೃತ್ಯ ಹಾಗೂ ಐಎಸ್‌ಐ ಪರ ಅಕ್ರಮ ಹಣ ವರ್ಗಾವಣೆ ಪೂರೈಕೆ ಸಂಬಂಧ ಪಾಕಿಸ್ತಾನದ ಪ್ರಜೆ ಬಾರ್ಖ ಶಾ ಎಂಬಾತನನ್ನು ಬಂಧಿಸಿದ್ದರು. 2012ರಲ್ಲಿ ಚಿಯಾಂಗ್ನಲ್ಲಿ ಅಮೆರಿಕ ರಾಯಭಾರ ಕಚೇರಿ ಎದುರು ನಡೆದಿದ್ದ ಪ್ರತಿಭಟನೆಯಲ್ಲಿ ಈತ ಪಾಲ್ಗೊಂಡಿದ್ದನ್ನು ಥಾಯ್ಲೆಂಡ್‌ ಪೊಲೀಸರು ಗಮನಿಸಿದ್ದರು.

ಈ ಬಾರ್ಖ ಶಾ ಬ್ಯಾಂಕಾಕ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ. ಈತನ ರೆಸ್ಟಾರೆಂಟ್‌ ಗಳು ಪಾಕ್‌ ಅಧಿಕಾರಿಗಳ ಸಭೆ ಸೇರುವ ತಾಣವಾಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

2016ರಲ್ಲಿ ನಕಲಿ ಪಾಸ್‌ಪೋರ್ಟ್‌ ಜಾಲದಲ್ಲೂ ಈತ ಭಾಗಿಯಾಗಿದ್ದ. ಈ ಸಂಬಂಧ ಇರಾನಿ ಪ್ರಜೆ ಹಮೀಜ್‌ ಜಫಾರಿ ಹಾಗೂ ಪಾಕಿಸ್ತಾನದ ಐವರನ್ನು ಬಂಧಿಸಲಾಗಿತ್ತು. ಈ ತಂಡವು, ಪ್ರಯಾಣ ಕುರಿತು ನಕಲಿ ದಾಖಲೆ ವಿತರಣೆ ಹಾಗೂ ಮಾನವ ಕಳ್ಳಸಾಗಣೆಯಲ್ಲಿ ಪಾಲ್ಗೊಂಡಿರುವುದು ದೃಢಪಟ್ಟಿತ್ತು. ಬ್ರಿಟನ್‌, ಆಸ್ಟ್ರೇಲಿಯಾ, ಫ್ರಾನ್ಸ್‌ , ನ್ಯೂಜಿಲೆಂಡ್‌ ಮತ್ತಿತರ ದೇಶಗಳ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿ ಹಮೀಜ್‌ ಇರುವುದು ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next