ಹೊಸದಿಲ್ಲಿ : ಪಾಕ್‌ನಲ್ಲಿ ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯ ಎಸಗಿದ ಆರೋಪದ ಮೇಲೆ ಪಾಕ್ ಮಿಲಿಟರಿಯಿಂದ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟು ಪ್ರಕೃತ ಅಲ್ಲಿನ ಜೈಲಿನಲ್ಲಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇರಾನಿನ ಚಾಬಹಾರ್ ಬಂದರಿನಿಂದ ಅಪಹರಿಸುವುದಕ್ಕಾಗಿ ಉಗ್ರ ಮುಲ್ಲಾ ಉಮರ್ ಬಲೂಚ್ ಇರಾನಿಗೆ ಪಾಕಿಸ್ಥಾನದ ಐಎಸ್‌ಐ ಕೋಟ್ಯಂತ ರೂ.ಗಳನ್ನು ನೀಡಿತ್ತು ಎಂಬ ವಿಷಯವನ್ನು ಬಲೂಚ್ ಕಾರ್ಯಕರ್ತ ಮಾಮಾ ಕಾದಿರ್ ಬಹಿರಂಗಪಡಿಸಿದ್ದಾರೆ.
ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಕಾದಿರ್ ಅವರು, ಪಾಕಿಸ್ಥಾನದ ಕುಪ್ರಸಿದ್ಧ ಬೇಹು ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿರುವ ಮುಲ್ಲಾ ಉಮರ್, ಕುಲಭೂಷಣ್ ಜಾಧವ್ ಅವರನ್ನು ಇರಾನಿನ ಚಾಬಹಾರ್ ಬಂದರಿನಲ್ಲಿ ಅಪಹರಿಸಿ ಪಾಕ್ ಐಎಸ್‌ಐ ವಶಕ್ಕೆ ಒಪ್ಪಿಸಿ ಕೋಟ್ಯಂತರ ರೂಪಾಯಿ ಪಡೆದುಕೊಂಡಿದ್ದಾನೆ ಎಂದು ಹೇಳಿದರು.
ಕಾದಿರ್ ಬಲೂಚ್ ಅವರು “ವಾಯ್ಸ ಫಾರ್ ಮಿಸ್ಸಿಂಗ್ ಬಲೂಚ್’ ಎಂಬ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ. ಜಾಧವ್ ಅವರ ಅಪಹರಣಕ್ಕೆ ಸಾಕ್ಷಿಯಾದ ತನ್ನ ಸಂಘಟನೆಯ ಓರ್ವ ಕಾರ್ಯಕರ್ತನಿಂದ ತನಗೆ ಈ ವಿಷಯ ತಿಳಿಯಿತೆಂದು ಕಾದಿರ್ ಹೇಳಿದರು.
ಜಾಧವ್ ಅವರನ್ನು ಚಾಬಹಾರ್ ಬಂದರಿನಲ್ಲಿ ಅಪಹರಿಸಿದ್ದ ಉಗ್ರ ಮುಲ್ಲಾ ಉಮರ್ ಇರಾನಿ ಬಲೂಚಿಸ್ಥಾನದಲ್ಲಿ ಐಎಸ್‌ಐ ಏಜಂಟ್ ಆಗಿ ಕೆಲಸಮಾಡುತ್ತಾನೆ. ಪಾಕ್ ಸರ್ವಾಧಿಕಾರಿ ಆಳ್ವಿಕೆ ವಿರುದ್ಧ ಹೋರಾಡಿದ ಅನೇಕ ಬಲೂಚಿಗಳ ಅಪಹರಣಕ್ಕೆ ಇವನೇ ಕಾರಣನಾಗಿದ್ದಾನೆ ಎಂದು ಕಾದಿರ್ ಹೇಳಿದರು.
ಇರಾನ್‌ನ ಚಾಬಹಾರ್ ನಲ್ಲಿ ಅಪಹರಿಸಲ್ಪಟ್ಟ ಜಾಧವ್ ಅವರನ್ನು ಅನಂತರ ಇರಾನ್ – ಬಲೂಚಿಸ್ಥಾನ ಗಡಿ ಪಟ್ಟಣವಾಗಿರುವ ಮಾಷೆRಲ್‌ಗೆ ಒಯ್ಯಲಾಗಿ ಅಲ್ಲಿಂದ ಮುಂದೆ ಕ್ಟೆಟ್ಟಾಗೆ ಮತ್ತು ಆ ಬಳಿಕ ಇಸ್ಲಾಮಾಬಾದ್‌ಗೆ ಒಯ್ದು ಅಲ್ಲಿ ಪಾಕ್ ಐಎಸ್‌ಐ ಗೆ ಒಪ್ಪಿಸಲಾಯಿತು ಎಂದು ಕಾದಿರ್ ಹೇಳಿದರು.