Advertisement

ಕಾಶ್ಮೀರದಲ್ಲಿ ಮತ್ತೆ ಗಲಭೆ ಎಬ್ಬಿಸಲು ಉಗ್ರ ಸಂಘಟನೆಗಳ ಸಭೆ ಸೇರಿದ ಐಎಸ್‌ ಐ

09:17 AM Sep 11, 2019 | keerthan |

ಇಸ್ಲಮಾಬಾದ್:‌ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಚಡಪಡಿಸುತ್ತಿರುವ ಪಾಕಿಸ್ಥಾನ, ಕಣಿವೆ ರಾಜ್ಯದಲ್ಲಿ ಮತ್ತೆ ಗಲಭೆ ಎಬ್ಬಿಸಲು ಸಂಚು ನಡೆಸಿದೆ.  ಮಹತ್ತರ ಬೆಳವಣಿಗೆಯಲ್ಲಿ ಪಾಕ್‌ ನ ಗುಪ್ತಚರ ಸಂಸ್ಥೆ ಐಎಸ್‌ ಐ ಇಸ್ಲಮಾಬಾದ್‌ ನಲ್ಲಿ ಉಗ್ರ ಸಂಘಟನೆಗಳೊಂದಿಗೆ ಸಭೆ ನಡೆಸಿದೆ.

Advertisement

ಪಾಕ್‌ ಮೂಲದ ಪ್ರಮುಖ ಉಗ್ರ ಸಂಘಟನೆಗಳಾದ ಜೈಶ್‌ ಎ ಮೊಹಮ್ಮದ್‌, ಲಶ್ಕರ್‌ ಎ ತೈಬಾ, ಹಿಜ್ಬುಲ್‌ ಮುಜಾಹಿದ್ದೀನ್‌, ಖಲಿಸ್ಥಾನಿ ಜಿಂದಾಬಾದ್‌ ಫೋರ್ಸ್‌ ಸಂಘಟನೆಗಳೊಂದಿಗೆ ಸಭೆ ನಡೆಸಿರುವ ಐಎಸ್‌ ಐ ಭಾರತದ ಮೇಲೆ ಉಗ್ರ ದಾಳಿ ನಡೆಸುವ ಬಗ್ಗೆ ಚರ್ಚಿಸಿದೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಗಮನ ಸೆಳೆಯುವ ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಯನ್ನು ಜಮ್ಮು ಕಾಶ್ಮೀರದಲ್ಲಿ ನಡೆಸಲು ಪಾಕ್‌ ಯೋಜನೆ ರೂಪಿಸಿದೆ. ಈ ಯೋಜನೆಗೆ ಖಲಿಸ್ಥಾನಿ ಜಿಂದಾಬಾದ್‌ ಉಗ್ರರ ಸಹಾಯ ಪಡೆಯಲು ಅದು ಯೋಚಿಸಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next