Advertisement

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

08:12 PM May 26, 2020 | Nagendra Trasi |

ಇಸ್ಲಾಮಾಬಾದ್:ಕೋವಿಡ್ 19 ಮಹಾಮಾರಿ ಜಗತ್ತಿನಾದ್ಯಂತ ಕ್ಷಿಪ್ರವಾಗಿ ಹರಡುತ್ತಿದ್ದು, ಪಾಕಿಸ್ತಾನದಲ್ಲಿ ಮಂಗಳವಾರದ ಅಂಕಿ ಅಂಶದ ಪ್ರಕಾರ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ 58,278ಕ್ಕೆ ಏರಿಕೆಯಾಗಿದೆ. ಅಲ್ಲದೇ ಸಾವಿನ ಸಂಖ್ಯೆ 1,202ಕ್ಕೆ ತಲುಪಿದೆ.

Advertisement

ಜಿಯೋ ನ್ಯೂಸ್ ಪ್ರಕಾರ, ಸಿಂಧ್ ಪ್ರಾಂತ್ಯದಲ್ಲಿ ನೂತನ ಕೋವಿಡ್ ವೈರಸ್ ನ 23,507 ಪ್ರಕರಣ, ಪಂಜಾಬ್ ಪ್ರಾಂತ್ಯದಲ್ಲಿ 20,654, ಖೈಬರ್ ಪಾಖ್ತುನ್ ಖಾವಾದಲ್ಲಿ 8080, ಬಲೂಚಿಸ್ತಾನದಲ್ಲಿ 3,468, ಇಸ್ಲಾಮಾಬಾದ್ ನಲ್ಲಿ 1,728, ಗಿಲ್ಗಿಟ್ ಬಾಲ್ಟಿಸ್ತಾನ್ ನಲ್ಲಿ 630 ಹಾಗೂ ಪಿಒಕೆಯಲ್ಲಿ 211 ಪ್ರಕರಣ ವರದಿಯಾಗಿದೆ.

ಸಿಂಧ್ ಪ್ರಾಂತ್ಯದಲ್ಲಿ ಅತೀ ಹೆಚ್ಚು ಕೋವಿಡ್ 19 ವೈರಸ್ ಪ್ರಕರಣ ವರದಿಯಾಗಿದೆ. ಕಳೆದ 24ಗಂಟೆಯಲ್ಲಿ 573 ಪ್ರಕರಣ ಪತ್ತೆಯಾಗಿತ್ತು. ಸಿಂಧ್ ನಲ್ಲಿ 14,618 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಮುರಾದ್ ಅಲಿ ಶಾ ತಿಳಿಸಿದ್ದಾರೆ.

ಕೋವಿಡ್ 19 ಲಾಕ್ ಡೌನ್ ನಂತರ ದೇಶದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿಕೆ ನೀಡಿದ್ದ ಇಮ್ರಾನ್ ಖಾನ್ ಸರ್ಕಾರದ ನೀತಿಯನ್ನು ವಿಪಕ್ಷ ನಾಯಕ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ಪಿಎಂಎಲ್ ಎನ್)ನ ಶೆಹ್ ಬಾಝ್ ಶರೀಫ್ ಟೀಕಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next