ಪಣಜಿ: ಕರಾಚಿ ಮೂಲದ ಭೂಗತ ಡಾನ್ ದಾವೂದ್ ಇಬ್ರಾಹಿಂನ ಹಸ್ತಾಂತರವು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಕೌನ್ಸಿಲ್ ಸಭೆಗಾಗಿ ಗೋವಾದಲ್ಲಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಈ ಹೇಳಿಕೆ ನೀಡಿದರು.
ಮಾಧ್ಯಮಗಳ ಸಂದರ್ಶನದಲ್ಲಿ ಭುಟ್ಟೋ ಮಾತನಾಡುತ್ತಿದ್ದರು. ಈ ಸಂದರ್ಶನದಲ್ಲಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುವುದರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಶಮನವಾಗುತ್ತದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದರು.
“ಹೆಚ್ಚಿರುವ ಅಶಾಂತಿಯು ಆಗಸ್ಟ್ 5, 2019 ರಂದು ಭಾರತದ ಕ್ರಮದ (ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ) ಪರಿಣಾಮವಾಗಿದೆ. ಆ ಸಮಯದಲ್ಲಿ, ಭಾರತ ಏಕಪಕ್ಷೀಯವಾಗಿ ಅಂತಾರಾಷ್ಟ್ರೀಯ ಕಾನೂನು, ನಿರ್ಣಯಗಳು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದೆ” ಎಂದು ಭುಟ್ಟೋ ಹೇಳಿದರು.
“ನಾವು ಯಾವುದೇ ಬದ್ಧತೆಯನ್ನು ಪೂರೈಸಲು ಬಯಸಿದರೆ ಅಥವಾ ನಾವು ಎರಡೂ ದೇಶಗಳ ನಡುವೆ ಯಾವುದೇ ಮಾತುಕತೆ ನಡೆಸಲು ಬಯಸಿದರೆ, ಲಿಖಿತ ದಾಖಲೆಗಳು ಅಥವಾ ಲಿಖಿತ ಒಪ್ಪಂದಗಳು ಇರುತ್ತವೆ” ಎಂದು ಭುಟ್ಟೋ ಹೇಳಿದರು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳಿಗೆ ಭಾರತದ ಬದ್ಧತೆಯನ್ನು ಪಾಕಿಸ್ತಾನ ನಂಬುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.