Advertisement

ತಕ್ಕ ಶಾಸ್ತಿ: ಪಾಕಿಸ್ಥಾನ ಬ್ಯಾಂಕಿಗೆ ಅಮೆರಿಕ ಬೀಗ

10:55 AM Sep 09, 2017 | Team Udayavani |

ನ್ಯೂಯಾರ್ಕ್‌: ಬರೋಬ್ಬರಿ 40 ವರ್ಷಗಳಿಂದ ಅಮೆರಿಕದ ಮಣ್ಣಲ್ಲೇ ಕಾರ್ಯನಿರ್ವಹಿಸುತ್ತಾ ಉಗ್ರರನ್ನು ಪೋಷಿಸುತ್ತಿದ್ದ ಪಾಕಿಸ್ಥಾನದ ಬ್ಯಾಂಕೊಂದಕ್ಕೆ ಇದೀಗ ಬೀಗ ಜಡಿಯಲಾಗಿದೆ. ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಬಗ್ಗೆ ನಿಗಾ ವಹಿಸದ ಆರೋಪದಲ್ಲಿ ಪಾಕ್‌ನ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಹಬೀಬ್‌ ಬ್ಯಾಂಕ್‌ ಅನ್ನು ಮುಚ್ಚಲು ಅಮೆರಿಕದ ಬ್ಯಾಂಕಿಂಗ್‌ ನಿಯಂತ್ರಣ ಸಂಸ್ಥೆ ಆದೇಶಿಸಿದೆ. ಅಷ್ಟೇ ಅಲ್ಲ, ಬ್ಯಾಂಕ್‌ಗೆ ಬರೋಬ್ಬರಿ 1,439.40 ಕೋಟಿ ರೂ. (225 ದಶಲಕ್ಷ ಡಾಲರ್‌) ದಂಡವನ್ನೂ ವಿಧಿಸಲಾಗಿದೆ.

Advertisement

ಆರಂಭದಲ್ಲಿ ಬ್ಯಾಂಕ್‌ಗೆ 4,024 ಕೋಟಿ ರೂ. ದಂಡ ಹಾಕಲು ನಿರ್ಧರಿಸಲಾಗಿತ್ತಾದರೂ ಕೊನೆಗೆ ದಂಡದ ಮೊತ್ತವನ್ನು ಕಡಿಮೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಬೀಬ್‌ ಬ್ಯಾಂಕ್‌ ಅಮೆರಿಕದಲ್ಲಿ 1978ರಿಂದಲೂ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿನಲ್ಲಿ ಉಗ್ರರಿಗೆ ಹಣಕಾಸು ಪೂರೈಕೆ, ಅಕ್ರಮ ಹಣ ವರ್ಗಾವಣೆ ಸಹಿತ ಅಕ್ರಮ ವಹಿವಾಟುಗಳು ನಡೆಯುತ್ತಿರುವ ಬಗ್ಗೆ ನಿಗಾ ವಹಿಸುವಂತೆ 2006ರಲ್ಲೇ ಬ್ಯಾಂಕಿಗೆ ಸೂಚಿಸಲಾಗಿತ್ತು. ಆದರೆ, ಅದನ್ನು ಬ್ಯಾಂಕ್‌ ಪಾಲಿಸಿರಲಿಲ್ಲ.

ಅಲ್ಲದೆ, ಹಬೀಬ್‌ ಬ್ಯಾಂಕ್‌ ಸೌದಿ ಅರೇಬಿಯಾದ ಖಾಸಗಿ ಬ್ಯಾಂಕ್‌ ಆಗಿರುವ ಅಲ್‌-ರಜಿØ ಬ್ಯಾಂಕ್‌ನೊಂದಿಗೆ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿತ್ತು. ಅಲ್‌-ರಜಿØ ಬ್ಯಾಂಕ್‌ ಉಗ್ರ ಸಂಘಟನೆ ಅಲ್‌ಕಾಯಿದಾ ಜತೆ ನಂಟು ಹೊಂದಿತ್ತು. ಈ ಕುರಿತು ಹಲವು ಬಾರಿ ಎಚ್ಚರಿಕೆ ಸಂದೇಶ ರವಾನಿಸಿದ್ದರೂ ಅದಕ್ಕೆ ಬ್ಯಾಂಕ್‌ ಕಿವಿಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ಅನ್ನು ಮುಚ್ಚಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next