Advertisement

ಭಾರತದ ವಿಸ್ತರಣಾ ಮನೋಭಾವ ಬಾಂಧವ್ಯಕ್ಕೆ ಧಕ್ಕೆ: ಪಾಕ್‌ ಆರೋಪ

08:25 AM Aug 15, 2017 | Team Udayavani |

ಇಸ್ಲಾಮಾಬಾದ್‌: “ಭಾರತದ ವಿಸ್ತರಣಾ ಮನೋಭಾವದಿಂದಲೇ ಪಾಕಿಸ್ತಾನ ಜತೆಗಿನ ಬಾಂಧವ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದ್ವಿಪಕ್ಷೀಯ ಒಪ್ಪಂದಕ್ಕೆ ಧಕ್ಕೆಯುಂಟಾಗುತ್ತಿದೆ’ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಸಾಧಿಕ್‌ ಖಾಕನ್‌ ಅಬ್ಟಾಸಿ ಗಂಭೀರ ಆರೋಪ ಮಾಡಿದ್ದಾರೆ.

Advertisement

70ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಭಾರತದ ಬಗ್ಗೆ ಪ್ರಸ್ತಾಪಿಸಿದ ಅಬ್ಟಾಸಿ, “ಧನಾತ್ಮಕ ಹಾಗೂ ರಚನಾತ್ಮಕವಾದ ಸಹಕಾರದಿಂದ ಹೆಜ್ಜೆ ಇಡಲು ಪಾಕಿಸ್ತಾನ ಬಯಸುತ್ತದೆ. ಆದರೆ, ಭಾರತದಿಂದ ಇದಕ್ಕೆ ಸಹಕಾರ ಸಿಗುತ್ತಿಲ್ಲ.’ ಎಂದಿದ್ದಾರೆ.

ಈಗ ಧ್ವಜ ಯುದ್ಧ: ಅಟ್ಟಾರಿಯ ವಾಘಾ ಗಡಿಯಲ್ಲಿ ಭಾರತ-ಪಾಕ್‌ ನಡುವೆ “ಧ್ವಜ ಯುದ್ಧ’ ಆರಂಭವಾಗಿದೆ. ಕಳೆದ ವರ್ಷ ಭಾರತವು ವಾಘಾ ಗಡಿಯಲ್ಲಿ 3.5 ಕೋಟಿ ವೆಚ್ಚದಲ್ಲಿ 360 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿತ್ತು. ಇದಕ್ಕೆ ಪ್ರತಿಸ್ಪರ್ಧೆ ನೀಡುವಂತೆ ಸೋಮವಾರ ಪಾಕಿಸ್ತಾನ 400 ಅಡಿ ಎತ್ತರದ ಪಾಕ್‌ ಧ್ವಜವನ್ನು ಹಾರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.