Advertisement

ಪಾಕಿಸ್ಥಾನಿ ಯುವಜನರ ಖಂಡನೆ

12:30 AM Feb 21, 2019 | |

ಪುಲ್ವಾಮಾದ ವಿಧ್ವಂಸಕ ಕೃತ್ಯ ಪಾಕಿಸ್ಥಾನ ಸರಕಾರದ ಮನ ಕಲಕಲಿಲ್ಲ. ಆದರೆ, ಆ ರಣ ಭೀಕರ ಘಟನೆಯಿಂದ ಅಲ್ಲಿನ ಕೆಲ ಪ್ರಜ್ಞಾವಂತ ಯುವಜನರ ಹೃದಯವಂತೂ ಮಿಡಿದಿದೆ. ಘಟನೆಯ ಅನಂತರ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿರುವ ಅಲ್ಲಿನ ಯುವಜನತೆ ಒಬ್ಬೊಬ್ಬರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಖೇದ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ #AntiHateChallenge ಹಾಗೂ #NoToWar ಎಂಬೆರಡು ಹ್ಯಾಶ್‌ಟ್ಯಾಗ್‌ಗಳನ್ನು ಸೃಷ್ಟಿಸಲಾಗಿದೆ. 

Advertisement

ಇದರ ಮೊದಲ ಹೆಜ್ಜೆಯೆಂಬಂತೆ, ಭಾರತ- ಪಾಕಿಸ್ಥಾನ ಶಾಂತಿ ಕಾರ್ಯಕರ್ತೆ ಮತ್ತು ಪತ್ರಕರ್ತೆಯೂ ಆಗಿರುವ ಶೆಹ್ರಿಲ್‌ ಮಿರ್ಜಾ ಎಂಬ ಯುವತಿ, “ನಾನು ಪಾಕಿಸ್ಥಾನಿ. ಪುಲ್ವಾಮಾ ಘಟನೆಯನ್ನು ಖಂಡಿಸುತ್ತೇನೆ. ದೇಶಭಕ್ತಿಯ ಹೆಸರಲ್ಲಿ ಮಾನವರ ಮಾರಣಹೋಮವನ್ನು ನಾನು ಮಾಡಲಾರೆ’ ಎಂಬ ಕೈಬರಹದ ಭಿತ್ತಿಪತ್ರವನ್ನು ಹಿಡಿದ ಫೋಟೋವನ್ನು ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡಿದ್ದಾರೆ. ಫೇಸ್‌ಬುಕ್‌ ಗ್ರೂಪ್‌ ಆದ “ಅಮನ್‌ ಕಿ ಆಶಾ’ದಲ್ಲೂ ಅವರು ಇದೇ ಮಾದರಿಯ ಪೋಸ್ಟ್‌ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next