Advertisement

ಜಮ್ಮು -ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಯುದ್ದೋನ್ಮಾದ ಸೂಕ್ತವೇ ? ಇಲ್ಲಿದೆ ಉತ್ತರ

09:24 AM Aug 31, 2019 | keerthan |

ಮಣಿಪಾಲ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ಮತ್ತು 35 ಎ ರದ್ದತಿಯ ನಂತರ ಪಾಕಿಸ್ಥಾನ ಕೆಂಡಕಾರುತ್ತಿದೆ. ಆ ದೇಶದ ಸಚಿವರೊಬ್ಬರು ಮುಂದಿನ ಅಕ್ಟೋಬರ್‌ ಅಥವಾ ನವೆಂಬರ್‌ ನಲ್ಲಿ ಭಾರತದ ವಿರುದ್ದ ಯುದ್ದ ಮಾಡುವ ಮಾತುಗಳನ್ನಾಡಿದ್ದಾರೆ. ಅದಲ್ಲದೇ ಪಾಕಿಸ್ಥಾನ ಕರಾಚಿಯಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದೆ. ಜಮ್ಮು – ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಯುದ್ದೋನ್ಮಾದ ಸೂಕ್ತವೇ ಎಂಬ ಪ್ರಶ್ನೆಯನ್ನು ʼಉದಯವಾಣಿ” ಓದುಗರಿಗೆ ಕೇಳಿದ್ದು, ಆಯ್ದ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ರೋಹಿಂದ್ರನಾಥ್‌ ಕೋಡಿಕಲ್: ದೇಶದಲ್ಲಿ ಬಗೆಹರಿಸಲಾಗದ ಸಮಸ್ಯೆಗಳು ಕಾಡುತ್ತಿದ್ದರೆ ಯುದ್ಧದ ಕಡೆಗೆ ಜನರ ಗಮನವನ್ನು ಸೆಳೆದರೆ ದೇಶಾಭಿಮಾನ ಉಕ್ಕಿ ಹರಿಯುವ ಸಾಧ್ಯತೆ ಯಾವಾಗಲೂ ಹೆಚ್ಚು. ಹಾಗಾಗಿ ಉನ್ಮಾದ ಹೆಚ್ಚಿಸುತ್ತಾ ಬಂದಲ್ಲಿ ಮುಖ್ಯ ವಿಚಾರ ಮರೆತೇ ಹೋಗುತ್ತದೆ.

ಮಹದೇವಯ್ಯ ದೇವಯ್ಯ: ಸರಿಯಿಲ್ಲ, ಜಮ್ಮು ಮತ್ತು ಕಾಶ್ಮೀರ ನಮ್ಮದು. ಆದರೆ ಪಿಓಕೆ ವಿಚಾರವಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡುವುದು ಸೂಕ್ತ. ಅವರಾಗಿಯೇ ಯುದ್ಧ ಮಾಡಿದರೆ, ಪಾಕ್ ಆಕ್ರಮಿಸಿಕೊಂಡಿದ್ದ ಕಾಶ್ಮೀರವನ್ನು ಅದೇ ಸಂದರ್ಭದಲ್ಲೇ ವಶಪಡಿಸಿಕೊಳ್ಳುವುದು ಸರಿಯಾದ ಸಮಯ

ಬಸವನಗೌಡ ಪಾಟೀಲ: ಒಂದು ವೇಳೆ ಯುದ್ಧವಾದರೆ ನಾವು ನಮ್ಮ ಆರ್ಥಿಕತೆ ಸ್ವಲ್ಪ ಕುಸಿದರು. ಮತ್ತೆ ಎದ್ದೇಳುವ ಉತ್ಸಾಹ ನಮ್ಮಲ್ಲಿದೆ. ಆದರೆ ಪಾಕಿಸ್ತಾನ ಯುದ್ಧದ ನಂತರ ಭೂಪಟದಿಂದ ಅಳಿಸಿ ಹೋಗಲಿದೆ

ಕೆ ಎಸ್ ಕೃಷ್ಣ: ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ನಮ್ಮ ದೇಶದ ಮೇಲೆ ಯುದ್ದ ನಡೆದರೆ ಸೋತು ಸುಣ್ಣವಾಗಿ ಅವರ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿಯುತ್ತದೆ

Advertisement

ರೋಹಿತ್‌ ರಾಜ್: ಭಾರತ ದೇಶದ ರಾಜ್ಯಕ್ಕೂ ಪಾಕಿಸ್ತಾನಕ್ಕೂ ಏನೂ ಸಂಬಂಧವಿಲ್ಲ.ಕೇವಲ ಅಲ್ಲಿನ ಪ್ರಧಾನಿ ಖಾನ್ ತನ್ನ ಸ್ಥಾನ ಭದ್ರ ಪಡಿಸಲು ನೋಡುತ್ತಿದ್ದಾನೆ. ತನ್ನ ರಾಜಕೀಯ ವೈಫಲ್ಯ ಮರೆಮಾಚಿ ಅಲ್ಲಿನ ಜನರ ಗಮನ ಬೇರೆಡೆ ತಿರುಗಿಸುವ ತಂತ್ರ. ಭಾರತದ ಬಗ್ಗೆ ಕೇವಲವಾಗಿ ಮಾತಾಡಿದರೆ ಅಲ್ಲಿ ಜನ ಸಲಾಂ ಹೊಡಿತಾರೆ ಅಂತಾನೂ ಮತ್ತು ತಪ್ಪಿಯೂ ಯುದ್ದ ಮಾಡಿದರೆ ಸೋಲು ಖಚಿತ ಅಂತಾನು ಗೊತ್ತು ಅಲ್ಲಿನ ಪ್ರಧಾನಿಗೆ.

ರಾಘವೇಂದ್ರ ಭಟ್: ಯುದ್ಧ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟು ನಾಲ್ಕು ಮಿಸೈಲ್ ಟೆಸ್ಟ್ ಮಾಡುವಂತೆ ಫ್ರಾನ್ಸ್, ಅಮೇರಿಕಾ , ರಷ್ಯಾ ಪಾಕಿಸ್ತಾನಕ್ಕೆ ಹೇಳಿ ನಾಲ್ಕು ಪಟಾಕಿ ಮತ್ತು ಹಣ ಕೊಟ್ಟಿರಬಹುದು. ಹಾಗಾದಾಗ, ಭಾರತ ಯುದ್ಧ ವಿಮಾನ ಖರೀದಿಸುತ್ತದೆ. ಇಬ್ಬರ ಜಗಳ , ಮೂರನೆಯವರಿಗೆ ಲಾಭ! ಇಷ್ಟೇ ಆಗೋದು.

ಸುಂದರ್‌ ರಾವ್: ನಮಗೆಲ್ಲಾ ತಿಳಿದಿರುವಂತೆ 1965/71ರಲ್ಲಿ ಪಾಕಿಸ್ಥಾನವೇ ತನ್ನ ಪ್ರಚೋದನಾತ್ಮಕ ನಡವಳಿಕೆಯಿಂದ ಯುದ್ದಕ್ಕೆ ಕಾರಣವಾಗಿತ್ತು. ಈಗಲೂ ಹೀಗೆ ಮುಂದುವರಿದರೆ ಭಾರತ ತಕ್ಕ ಉತ್ತರ ಕೊಡಬೇಕು.

ರಜನಿಕಾಂತ್‌ ಕುಲಕರ್ಣಿ: ಜಮ್ಮು ಕಾಶ್ಮೀರ ಯಾವತ್ತೂ ಪಾಕಿಸ್ಥಾನದ ಭಾಗವಾಗಲ್ಲ. ಒಂದು ವೇಳೆ ಯುದ್ದ ನಡೆದರೆ ಈಗಾಗಲೇ ದಿವಾಳಿಯಾಗಿರುವ ಪಾಕಿಸ್ಥಾನದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ.

ರಾಜಶೇಖರ್‌ ಮರಿಗೌಡ: ನಾವು ಚೀನಾವನ್ನು ಮೊದಲು ನಿಯಂತ್ರಣ ಮಾಡಬೇಕು. ಯಾಕೆಂದರೆ ಪಾಕಿಸ್ಥಾನಕ್ಕೆ ಪರೋಕ್ಷವಾಗಿ ಸಹಾಯ ಮಾಡುವುದು ಚೀನಾವೇ.

Advertisement

Udayavani is now on Telegram. Click here to join our channel and stay updated with the latest news.

Next