Advertisement

ಜಾಧವ್‌ ಕುಟುಂಬಕ್ಕೆ ವೀಸಾ ಕೊಟ್ಟ ಪಾಕ್‌

07:00 AM Dec 21, 2017 | Harsha Rao |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್‌ ಪತ್ನಿ, ತಾಯಿಗೆ ಪಾಕಿಸ್ತಾನ ಸರ್ಕಾರ ವೀಸಾ ನೀಡಿದೆ. ಡಿ.25ರಂದು ಅವರು ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ. ಈ ಬಗ್ಗೆ ಬುಧವಾರ ನೆರೆಯ ರಾಷ್ಟ್ರದ ವಿದೇಶಾಂಗ ಕಚೇರಿ ಮಾಹಿತಿ ನೀಡಿದ್ದು, ಸರ್ಕಾರದ ಸೂಚನೆಯಂತೆ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಗೆ ನಿರ್ದೇಶ ನೀಡಲಾಗಿತ್ತು. ಅದರಂತೆ ನಡೆದುಕೊಳ್ಳಲಾಗಿದೆ ಎಂದಿದೆ. ಜಾಧವ್‌ ಪತ್ನಿ, ತಾಯಿ ಜತೆಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಅವರ ಜತೆ ನವದೆಹಲಿಯಿಂದ ಪ್ರಯಾಣಿಸಲಿದ್ದಾರೆ. ಕೆಲ ದಿನಗಳ ಹಿಂದೆ ವೀಸಾ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾಗ ಅದನ್ನು ಪಾಕ್‌ ತಿರಸ್ಕರಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next