Advertisement

ಮೋದಿಗೆ ಪಾಕ್‌ ಗಾಯಕಿಯ ಎಚ್ಚರಿಕೆ!

11:31 AM Sep 07, 2019 | Team Udayavani |

ಹೊಸದಿಲ್ಲಿ: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದಕ್ಕೆ ಪಾಕಿಸ್ಥಾನದ ರಬಿ ಪಿರ್ಜಾದಾ ಎಂಬ ಗಾಯಕಿ, ಬುಸುಗುಡುವ ಹಾವುಗಳು, ಮೊಸಳೆಗಳನ್ನು ಒಂದು ಕೊಠಡಿಯೊಳಗೆ ತಂದು ಅವುಗಳೊಂದಿಗೆ ತಾನೊಂದು ವಿಡಿಯೋ ತುಣುಕೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾಳೆ!

Advertisement

‘ಮೋದಿ, ನೀನು ಕಾಶ್ಮೀರಿಗರಿಗೆ ತೊಂದರೆ ಕೊಡುತ್ತಿದ್ದೀಯಲ್ವಾ? ನೋಡು ನಿನಗೆ ನಾನು ಎಂಥ ಗಿಫ್ಟ್ ರೆಡಿ ಮಾಡಿದ್ದೀನಿ ಅಂತ’ ಎಂದು ಏಕವಚನದಲ್ಲೇ ಮೋದಿಯವರಿಗೆ ಎಚ್ಚರಿಸಿದ್ದಾಳೆ ಆಕೆ. ಆಕೆಯ ವಿಡಿಯೋವನ್ನು ನೋಡಿದ ಭಾರತದ ನೆಟ್ಟಿಗರು ಆಕೆಯನ್ನು ಸಿಕ್ಕಾಬಟ್ಟೆ ಗೇಲಿ ಮಾಡಿದ್ದಾರೆ. ಕೆಲವರು ”ನಿನಗೆ ತಲೆ ಕೆಟ್ಟಿದೆ. ಉತ್ತಮ ಚಿಕಿತ್ಸೆ ಬೇಕಿದ್ದರೆ ನೀನು ಭಾರತಕ್ಕೆ ಬಾ. ಬೇಗನೇ ಮೆಡಿಕಲ್ ವೀಸಾಗೆ ಅರ್ಜಿ ಹಾಕು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next