ಮುಂಬಯಿ: ಪಾಕಿಸ್ತಾನದ ಜನಪ್ರಿಯ ಗಾಯಕ ಅತೀಫ್ ಅಸ್ಲಾಂ ಮತ್ತೊಮ್ಮೆ ಬಾಲಿವುಡ್ ಸಿನಿಮಾದ ಹಾಡುಗಳ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. 7 ವರ್ಷದ ಬಳಿಕ ಪಾಕ್ ಗಾಯಕನ ಧ್ವನಿ ಭಾರತೀಯರ ಮನದಲ್ಲಿ ರಾರಾಜಿಸಲಿದೆ.
ಮೆಲೋಡಿ ಹಾಗೂ ರೊಮ್ಯಾಂಟಿಕ್ ಹಾಡುಗಳನ್ನು ಕೇಳಿದವರು ಅತೀಫ್ ಅಸ್ಲಾಂ ಅವರ ಹೆಸರು ಕೇಳುವುದು ಹೊಸತಲ್ಲ. ಮೂಲತಃ ಪಾಕಿಸ್ತಾನದವರಾದರೂ ಭಾರತೀಯ ಮ್ಯೂಸಿಕ್ ಪ್ರಿಯರಿಗೆ ಅತೀಫ್ ಅಸ್ಲಾಂ ಅವರ ಹಾಡುಗಳೆಂದರೆ ಅಚ್ಚುಮೆಚ್ಚು ಎನ್ನುವ ಕಾಲವೊಂದಿತ್ತು.
ಆದರೆ 2016 ರ ಉರಿ ದಾಳಿಯ ಬಳಿಕ ಪಾಕಿಸ್ತಾನದ ಕಲಾವಿದರಿಗೆ ಭಾರತದ ಮನರಂಜನಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದರ ಮೇಲೆ ಬ್ಯಾನ್ ಹೇರಿದ ಬಳಿಕ ಅತೀಫ್ ಅಸ್ಲಾಂ ಅವರು ಸೇರಿದಂತೆ ಪಾಕಿಸ್ತಾನದ ಯಾವ ಕಲಾವಿದರು ಭಾರತದ ಮನರಂಜನಾ ರಂಗದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಈ ಬ್ಯಾನ್ ತೆರವುಗೊಂಡಿದ್ದು, ಅತೀಫ್ ಅಸ್ಲಾಂ ಮತ್ತೆ ಬಾಲಿವುಡ್ ನಲ್ಲಿ ತನ್ನ ಧ್ವನಿ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ನಾನು ಯಾವ ಕೆಲಸ ಮಾಡಿದರೂ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇನೆ: ದೇವರಕೊಂಡ ಬಗ್ಗೆ ರಶ್ಮಿಕಾ
ʼಲವ್ ಸ್ಟೋರಿ 90ʼs’ ಎನ್ನುವ ಸಿನಿಮಾ ಹಾಡೊಂದನ್ನು ಅತೀಫ್ ಅಸ್ಲಾಂ ಹಾಡಲಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಚಿತ್ರತಂಡ ನೀಡಿಲ್ಲ. ಆದರೆ ಈ ಹಾಡು 2024 ರ ದೊಡ್ಡ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಚಿತ್ರತಂಡ ಹೇಳಿದೆ.
ಅತೀಫ್ ಅಸ್ಲಾಂ ಬಾಲಿವುಡ್ ಕಂಬ್ಯಾಕ್ ಬಗ್ಗೆ ಇನ್ನಷ್ಟೇ ಮಾತನಾಡಬೇಕಿದೆ. ಈ ಸಿನಿಮಾದಲ್ಲಿ ಅಧ್ಯಯನ್ ಸುಮನ್ ಮತ್ತು ದಿವಿತಾ ರೈ ಕಾಣಿಸಿಕೊಳ್ಳಲಿದ್ದಾರೆ.
ಅತೀಫ್ ಅಸ್ಲಾಂ ಅವರು ಬಾಲಿವುಡ್ ನಲ್ಲಿ ʼಅದತ್ʼ, ʼವೋ ಲಮ್ಹೆ ವೋ ಬಾತೇನ್, ʼಪೆಹ್ಲಿ ನಜರ್ ಮೇ, ʼಬೇ ಇಂತಿಹಾನ್ʼ, ʼ ತೇರಾ ಹೋನೆ ಲಗಾ ಹೂಂʼ, ʼದಿಲ್ ದಿಯಾ ಗಲ್ಲನ್ʼ ಮುಂತಾದ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.