Advertisement

ಪಾಕ್‌ನಲ್ಲಿ ಹೊಸ ಸಂಪುಟ ಅಸ್ತಿತ್ವಕ್ಕೆ

08:25 AM Aug 05, 2017 | Karthik A |

ಇಸ್ಲಾಮಾಬಾದ್‌: ಪಾಕ್‌ನ ನೂತನ ಪ್ರಧಾನಿಯಾಗಿ ಶಾಹಿದ್‌ ಕಖಾನ್‌ ಅಬ್ಟಾಸಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ 28 ಸಚಿವರು ಹೊಸ ಸಂಪುಟಕ್ಕೆ ಸೇರಿದ್ದಾರೆ. ಖ್ವಾಜಾ ಆಸಿಫ್ ಅವರು 2013ರ ಬಳಿಕ ದೇಶದ ಮೊದಲ ಪೂರ್ಣಪ್ರಮಾಣದ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ. ಸಂಪುಟದಲ್ಲಿ ಹಳೆಯ ಮುಖಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದರೂ ಕೆಲವು ಹೊಸಬರಿಗೆ ಸಹಾಯಕ ಸಚಿವರ ಸ್ಥಾನಮಾನ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next