Advertisement

ಪಾಕ್ ಒಳನುಸುಳುಕಾರನ ಹೊಡೆದುರುಳಿಸಿದ ಬಿಎಸ್ ಎಫ್

09:54 AM Oct 18, 2019 | Team Udayavani |

ಶ್ರೀನಗರ: ಭಾರತ- ಪಾಕಿಸ್ಥಾನ ಗಡಿಯ ಅಠಾರಿ ಭಾಗದಲ್ಲಿ ಗಡಿ ರಕ್ಷಣಾ ಪಡೆಯ ಯೋಧರು ಪಾಕ್ ಒಳನುಸುಳುಗಾರನನ್ನು ಹೊಡೆದುರುಳಿಸಿದ್ದಾರೆ.

Advertisement

ಅಠಾರಿಯ ರೈಲ್ವೇ ಟ್ರಾಕ್ ಬಳಿ  ಭಾರತದ ಗಡಿಯೊಳಗೆ ನುಸುಳಲು ಈತ ಪ್ರಯತ್ನ ಮಾಡಿದ್ದು, ಯೋಧರು ಹೊಡೆದುರುಳಿಸಿದ್ದಾರೆ. ಈತನನ್ನು ಗುಲ್ ನವಾಜ್ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿಯ ವೇಳೆಗೆ ಗೇಟ್ ನಂ 103ರಲ್ಲಿ ವ್ಯಕ್ತಿಯೊಬ್ಬ ಗಡಿ ದಾಟುತ್ತಿರುವುದು ಯೋಧರ ಗಮನಕ್ಕೆ ಬಂದಿತ್ತು. ಬಿಎಸ್ ಎಫ್ ಯೋಧರು ಆತನಿಗೆ ಹಿಂದೆ ಹೋಗುವಂತೆ ಸೂಚಿಸಿದ್ದು, ಆದರೆ ಆತ ನಿರಾಕರಿಸಿದ್ದ. ನಂತರ ಯೋಧರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next