Advertisement

ನಮ್ಮಲ್ಲಿ ಕೊಹ್ಲಿ, ಧೋನಿ ಆಡಲಿ ಪಾಕ್‌ ಅಭಿಮಾನಿಗಳ ಆಗ್ರಹ

06:05 AM Sep 13, 2017 | Team Udayavani |

ಲಾಹೋರ್‌: ಈಗಾಗಲೇ ಪಾಕಿಸ್ಥಾನದಲ್ಲಿ ವಿಶ್ವ ಇಲೆವೆನ್‌ ಮತ್ತು ಆತಿಥೇಯ ತಂಡದ ನಡುವೆ ಟಿ-20 ಸರಣಿ ಆರಂಭವಾಗಿದೆ. ಆದರೆ ಪಾಕ್‌ ಅಭಿಮಾನಿಗಳು ಭಾರತೀಯ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದು ಟ್ವೀಟ್‌ ಮಾಡುತ್ತಿದ್ದಾರೆ.

Advertisement

ವಿಶ್ವ ತಂಡದಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಬಾಂಗ್ಲಾದೇಸ, ಶ್ರೀಲಂಕಾ, ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ತಂಡದ ಆಟಗಾರರಿದ್ದಾರೆ. ಆದರೆ ಭಾರತೀಯ ಆಟಗಾರರು ಆಡುತ್ತಿಲ್ಲ. ಇದು ಪಾಕ್‌ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅಭಿಮಾನಿಗಳು, “ನಾವು ಪಾಕಿಸ್ಥಾನದಲ್ಲಿ ಕೊಹ್ಲಿ, ಧೋನಿ ಆಡುವುದನ್ನು ಬಯಸುತ್ತೇವೆ. ನಾವು ಅವರ ಅಭಿಮಾನಿಗಳು. ಈ ಸಂದರ್ಭದಲ್ಲಿ ನಾವು ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next