Advertisement

ಹಸ್ತಾಂತರ ತಪ್ಪಿಸಲು ಡ್ರಾಮಾ

12:55 AM Jul 03, 2019 | Team Udayavani |

ಲಂಡನ್‌: ಕಳೆದ ವರ್ಷ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐನಿಂದ ಬಂಧಿತನಾಗಿರುವ ಜಬೀರ್‌ ಮೋಟಿವಾಲಾ (52)ನನ್ನು ಇಂಗ್ಲೆಂಡ್‌ನಿಂದ ಅಮೆರಿಕಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಗೆ ಪಾಕಿಸ್ತಾನ ಅಡ್ಡಿಪಡಿಸುತ್ತಿದೆ.

Advertisement

ನೇರವಾಗಿಯೇ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಆಜ್ಞೆ ಸ್ವೀಕರಿಸುವ ಈತನನ್ನು 2018ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು.

ಲಂಡನ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಆತನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಬಗ್ಗೆ ವಿಚಾರಣೆ ಶುರುವಾಗಿದೆ. ಒಂದು ವೇಳೆ, ಆತ ಅಮೆರಿಕಕ್ಕೆ ತೆರಳುವಂತಾದರೆ ದಾವೂದ್‌ ಮತ್ತು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ನಡುವಿನ ನಂಟು, ಅವರ ಕರಾಳ ಕೆಲಸಗಳ ಸಮಗ್ರ ಮಾಹಿತಿ ಅನಾವರಣಗೊಳ್ಳಲಿದೆ.

ಈ ಕಾರಣಕ್ಕಾಗಿ ಮೋಟಿವಾಲನಿಗೆ ಗಂಭೀರವಾದ ಖನ್ನತೆ ಕಾಯಿಲೆ ಇದೆ ಎಂಬ ವಾದವನ್ನು ಆತನ ವಕೀಲರು ನ್ಯಾಯಾಲಯದ ಮುಂದಿಟ್ಟಿದ್ದಾರೆ. ಲಂಡನ್‌ನಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ ಕೂಡ ಗಡಿಪಾರು ಪ್ರಕ್ರಿಯೆ ನಡೆಯದಂತೆ ಮಾಡುವ ಪ್ರಯತ್ನದಲ್ಲಿದೆ.

ಸದ್ಯ ಆತ ಲಂಡನ್‌ನ ವಾಂಡ್ಸ್‌ವರ್ತ್‌ ಕಾರಾಗೃಹದಲ್ಲಿ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 13,400 ಕೋಟಿ ರೂ. ವಂಚಿಸಿದ ನೀರವ್‌ ಮೋದಿ ಜತೆಗೆ ಇದ್ದಾನೆ.

Advertisement

ಅಕ್ರಮ ಹಣ ವರ್ಗಾವಣೆ, ಹೆರಾಯಿನ್‌ ಮತ್ತು ಇತರ ಮಾದಕ ವಸ್ತುಗಳ ಸಾಗಣೆಗೆ ಸಂಚು, ವಸೂಲಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಎಫ್ಬಿಐ ತನಿಖೆಯಲ್ಲಿ ಕಂಡುಕೊಂಡಿದೆ.

ಹೀಗಾಗಿ, ಆತನನ್ನು ಗಡಿಪಾರು ಮಾಡಬೇಕು ಎಂದು ತನಿಖಾ ಸಂಸ್ಥೆ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ಇಂಗ್ಲೆಂಡ್‌ನ‌ ಖ್ಯಾತ ವಕೀಲ ಜಾನ್‌ ಹಾರ್ಡಿ ಆತನ ಪರವಾಗಿ ವಾದಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next