Advertisement
ಗುಪ್ತಚರ ಮೂಲಗಳಿಂದ ಹೊರಬಿದ್ದಿರುವ ಆಘಾತಕಾರಿ ಮಾಹಿತಿಯೊಂದು ಇಂಥ ಸುಳಿವನ್ನು ನೀಡಿದೆ. ಚೀನವು ತನ್ನ ಗಡಿಗಳಲ್ಲಿನ ಮುಖ್ಯ ಕಚೇರಿಗಳಲ್ಲಿ ಪಾಕಿಸ್ಥಾನದ ಸೇನಾಧಿ ಕಾರಿ ಗಳನ್ನು ನೇಮಕ ಮಾಡಿರುವುದೇ ಈ ಅನುಮಾನಕ್ಕೆ ಕಾರಣ.
Related Articles
ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಕೆಲಸವೇ ಭಾರತ ದೊಂದಿಗಿನ ಹಾಗೂ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗಿನ ಗಡಿ ರಕ್ಷಣೆ. ಕಳೆದ ತಿಂಗಳಷ್ಟೇ ಚೀನವು ಈ ಕಮಾಂಡ್‌ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಿಯಾಂಗ್‌ರನ್ನು ನೇಮಕ ಮಾಡಿತ್ತು.
Advertisement
ಇದನ್ನೂ ಓದಿ:ರಾಜಸ್ಥಾನ ಸಿಎಂ ಗೆಹ್ಲೋಟ್ ನನ್ನ ಸ್ನೇಹಿತ; ಪ್ರಧಾನಿ ಶ್ಲಾಘನೆ
ಈಗ ಏಕಾಏಕಿ ಚೀನದ ಕೇಂದ್ರ ಸೇನಾ ಆಯೋಗದ ಜಂಟಿ ಸಿಬಂದಿ ವಿಭಾಗದಲ್ಲಿ ಪಾಕಿಸ್ಥಾನ ಸೇನೆಯ ಕರ್ನಲ್ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿಶೇಷವೆಂದರೆ ಯುದ್ಧ ತಂತ್ರ, ಚೀನದ ಸಶಸ್ತ್ರ ಪಡೆಗಳಿಗೆ ತರಬೇತಿ, ವ್ಯೂಹಾತ್ಮಕ ಕಾರ್ಯತಂತ್ರ ರೂಪಿಸುವ ಕೆಲಸವನ್ನು ಈ ಆಯೋಗ ಮಾಡುತ್ತದೆ.
ನಡೆದಿದೆಯೇ ಕುತಂತ್ರ?ಈಗಾಗಲೇ ಒಂದೆಡೆ ಗಡಿ ಪ್ರದೇಶಗಳಲ್ಲಿ ಉಗ್ರರನ್ನು ಒಳನುಸುಳುವಂತೆ ಮಾಡಿ, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ಥಾನವು ತುದಿಗಾಲಲ್ಲಿ ನಿಂತಿದೆ. ಇತ್ತೀಚೆಗಷ್ಟೇ ನುಸುಳುವಿಕೆಗೆ ಯತ್ನಿಸಿದ್ದ ಹಲವು ಉಗ್ರರನ್ನು ನಮ್ಮ ಭದ್ರತಾ ಪಡೆ ಹೊಡೆದುರುಳಿಸಿದೆ. ಇನ್ನೊಂದೆಡೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನದ ಸೇನೆಗಳು ವಾಪಸಾತಿ ಪ್ರಕ್ರಿಯೆ ನಡೆಸುತ್ತಿರುವ ನಡುವೆಯೇ ಪೂರ್ವ ಲಡಾಖ್‌ನಲ್ಲಿ ಭಾರೀ ಸಂಖ್ಯೆಯ ಚೀನೀ ಸೈನಿಕರ ನಿಯೋಜನೆ ಪ್ರಕ್ರಿಯೆ ನಡೆಯುತ್ತಲೇ ಇದೆ. ಮತ್ತೊಂದೆಡೆ ಸೇನಾ ಸಾಮಗ್ರಿ ಖರೀದಿ ಸಂಬಂಧಿ ಪ್ರಾಜೆಕ್ಟ್ ಗಳಿಗೆಂದು ಬೀಜಿಂಗ್‌ನಲ್ಲಿರುವ ಚೀನದ ರಾಯಭಾರ ಕಚೇರಿಯಲ್ಲೂ 10 ಮಂದಿ ಹೆಚ್ಚುವರಿ ಪಾಕ್ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಪಾಕಿಸ್ಥಾನ ಮತ್ತು ಡ್ರ್ಯಾಗನ್ ರಾಷ್ಟ್ರವು ಭಾರತದ ವಿರುದ್ಧ ಯಾವುದೋ ಕುತಂತ್ರ ರೂಪಿಸುತ್ತಿರುವ ಶಂಕೆ ಬಲವಾಗುತ್ತಿದೆ.