Advertisement

ಪಾಕ್‌ಗೆ ವಿಧಿಸಲಾಗಿದ್ದ ವೈಮಾನಿಕ ನಿರ್ಬಂಧ ತೆರವು

01:16 AM Jun 01, 2019 | mahesh |
ನವದೆಹಲಿ: ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮೊದಲ ಕ್ರಮವಾಗಿ ಭಾರತೀಯ ವಾಯುಗಡಿಯಲ್ಲಿ ಪಾಕ್‌ಗೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಸಡಿಲಿಸಿದ್ದಾರೆ. ಬಾಲಕೋಟ್ ದಾಳಿ ನಂತರದಲ್ಲಿ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ. ಪಾಕಿಸ್ತಾನ ಕೂಡ ತನ್ನ ವಾಯುಗಡಿಯೊಳಕ್ಕೆ ಭಾರತದ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿದೆ. ಇದರಿಂದ ದೆಹಲಿಯಿಂದ ಸೌದಿ ಅರೇಬಿಯಾ ಸೇರಿದಂತೆ ಇತರ ದೇಶಗಳಿಗೆ ಪ್ರಯಾಣಿಸುವ ವಿಮಾನ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತಾಗಿದೆ. ಫೆ. 27ರಿಂದ ಈ ವಿಮಾನಗಳು ಪರ್ಯಾಯ ಮಾರ್ಗದಲ್ಲಿ ಸಾಗುತ್ತಿದ್ದು, ಮೂರು ಗಂಟೆ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿದೆ. ಪಾಕ್‌ ಸಹ ನಿರ್ಬಂಧವನ್ನು ತೆರವುಗೊಳಿಸಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.
Advertisement

Udayavani is now on Telegram. Click here to join our channel and stay updated with the latest news.

Next