ಇಸ್ಲಾಮಾಬಾದ್ : ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಿರ್ಧಾರವನ್ನು ಭಾರತ ಹಿಂಪಡೆಯುವರೆಗೂ ಪಾಕಿಸ್ತಾನವು ಭಾರತದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಸಾರ್ವಜನಿಕರೊಂದಿಗೆ ವರ್ಚುವಲ್ ಮೀಟಿಂಗ್ ನಲ್ಲಿ ಸಾರ್ವಜನಿಕರೊಂದಿಗೆ ಮಾತಾಡಿದ ಖಾನ್, ಕಾಶ್ಮೀರದ ಕುರಿತ ನಿರ್ಧಾರವನ್ನು ಭಾರತ ಬದಲಾಯಿಸಲಿ, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಮರುಸ್ಥಾಪನೆ ಮಾಡಲಿ, ಅಲ್ಲಿಯವರೆಗೆ ಭಾರತದೊಂದಿಗೆ ಯಾವುದೇ ಮಾತುಕತೆಗೆ ನಾವು ಮುಂದಾಗುವುದಿಲ್ಲವೆಂದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಎರಡನೇ ಡೋಸ್ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ
ಆಗಸ್ಟ್ 5 ರಂದು ಭಾರತ ಕೈಗೊಂಡ ಕ್ರಮಗಳಿಂದ ಹಿಂದೆ ಸರಿಯದಿದ್ದರೆ … ಪಾಕಿಸ್ತಾನ ಸರ್ಕಾರ ಭಾರತದೊಂದಿಗೆ ಮಾತನಾಡುವುದಿಲ್ಲ ಎಂದಿದ್ದಾರೆ. ಭಾರತ 2019 ರಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸಿ, ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.
ಇದಕ್ಕೂ ಮುನ್ನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಇದೇ ರೀತಿಯ ಹೇಳಿಕೆ ನೀಡಿದ್ದು, ಈಗ ಭಾರತದೊಂದಿಗೆ ಮಾತುಕತೆ ನಡೆಸಲಾಗುತ್ತಿಲ್ಲ. ಭಾರತ ಇದುವರೆಗೆ ಕಾಶ್ಮೀರದೆಡೆಗಿನ ನೀತಿ ಬದಲಿಸಿದಲ್ಲಿ, ಕಾಶ್ಮೀರಕ್ಕೆ ಸಂಬಂಧಿಸಿದ ತನ್ನ ನೀತಿಯನ್ನು ಮರುಪರಿಶೀಲಿಸಿದರೆ ಮತ್ತು ಕಾಶ್ಮೀರದ ಜನರಿಗೆ ಪರಿಹಾರವನ್ನು ನೀಡಿದರೆ ಮಾತುಕತೆಗೆ ಪಾಕಿಸ್ಥಾನ ಯೋಚನೆ ಮಾಡುತ್ತದೆ. ಇಲ್ಲವಾದಲ್ಲಿ ಭಾರತದೊಂದಿಗೆ ಮಾತನಾಡಲು ಮುಂದಾಗುವುದಿಲ್ಲವೆಂದು ಹೇಳಿದ್ದರು.
ಇದನ್ನೂ ಓದಿ : ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್