Advertisement

ವೀರ್ ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ಥಾನ ರಚನೆಯಾಗುತ್ತಿರಲಿಲ್ಲ: ಉದ್ದವ್ ಠಾಕ್ರೆ

08:37 AM Sep 19, 2019 | Mithun PG |

ಮುಂಬೈ:  ವೀರ್ ಸಾವರ್ಕರ್ ಪ್ರಧಾನಮಂತ್ರಿಯಾಗಿದ್ದರೆ ಪಾಕಿಸ್ಥಾನ ಹುಟ್ಟುತ್ತಿರಲಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ತಿಳಿಸಿದ್ದಾರೆ.

Advertisement

ಸಾವರ್ಕರ್ ಜೀವನ ಚರಿತ್ತೆ “ಎಕೋಸ್ ಫ್ರಮ್ ಎ ಫರ್ ಗಾಟನ್ ಫಾಸ್ಟ್” ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು  ಎನ್ ಡಿ ಎ ಸರಕಾರ ಹಿಂದುತ್ವ ಪರವಾಗಿದ್ದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ವೀರ್ ಸಾವರ್ಕರ್ ಅವರಿಗೆ ನೀಡಬೇಕೆಂದು ಇದೇ ವೇಳೆ ಒತ್ತಾಯಿಸಿದರು.

ದೇಶದ ಅಭಿವೃದ್ದಿಗಾಗಿ ಮಹಾತ್ಮ ಗಾಂಧೀಜಿ ಮತ್ತು ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ  ನೀಡಿದ ಕೊಡುಗೆಯನ್ನು ಎಂದಿಗೂ ಅಲ್ಲಗೆಳೆಯುವುದಿಲ್ಲ, ಆದರೇ ರಾಜಕಾರಣ ಎಂಬುದು ಎರಡು ಕುಟುಂಬಗಳಿಗೆ ಸೀಮಿತವಾಗಬಾರದು. ದೇಶದ ಆಭಿವೃದ್ಧಿಗಾಗಿ ಪಣತೊಡುವವರು ರಾಜಕಾರಣಿಯಾಗಿ ಬರಲು ಅವಕಾಶ ಸಿಗಬೇಕೆಂದು ಎಂದು ಅಭಿಪ್ರಾಯಪಟ್ಟರು.  14 ವರುಷಗಳ ಕಾಲ ಜೈಲಿನಲ್ಲಿದ್ದ ವೀರ್ ಸಾವರ್ಕರ್ ರಂತೆ ಕೇವಲ 14 ನಿಮಿಷ ನೆಹರೂ ಜೈಲಿನಲ್ಲಿದ್ದರೆ ಅವರನ್ನು ‘ವೀರ್’ ಎಂದು ಕರೆಯುತ್ತಿದ್ದೆ ಎಂದು ಇದೇ ವೇಳೆ ತಿಳಿಸಿದರು.

ರಾಹುಲ್ ಗಾಂಧಿ ವೀರ್ ಸಾವರ್ಕರ್ ಕುರಿತ ಪುಸ್ತಕಗಳನ್ನು ಹೆಚ್ಚು ಹೆಚ್ಚಾಗಿ ಓದಬೇಕಾಗಿದೆ. ಹಾಗಾದರೂ ಠೀಕೆ  ಮಾಡುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.  “ಜೈಲಿನಿಂದ ಸ್ವಾತಂತ್ರ್ಯ ಪಡೆಯುವ ಸಲುವಾಗಿ ವೀರ್ ಸಾವರ್ಕರ್ ಬ್ರಿಟಿಷರಿಗೆ ಕ್ಷಮೆಯಾಚಿಸಿದ್ದರು” ಎಂದು 2019 ರ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು

Advertisement

Udayavani is now on Telegram. Click here to join our channel and stay updated with the latest news.

Next