Advertisement

ಪರದಾಡಿ ಗೆದ್ದ ಪಾಕಿಸ್ಥಾನ: ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ

09:07 AM Jun 30, 2019 | Team Udayavani |

ಲೀಡ್ಸ್‌: ಅಫ್ಘಾನಿಸ್ಥಾನ ವಿರುದ್ಧದ ಸಣ್ಣ ಮೊತ್ತದ ಮೇಲಾಟದಲ್ಲಿ ಪಾಕಿಸ್ಥಾನ ಪರದಾಟ ನಡೆಸಿ 3 ವಿಕೆಟ್‌ಗಳ ಜಯ ಸಾಧಿಸಿದೆ. ಈ ಫ‌ಲಿತಾಂಶದೊಂದಿಗೆ ಪಾಕ್‌ 9 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ನೆಗೆದರೆ, ಇಂಗ್ಲೆಂಡ್‌ 5ನೇ ಜಾರಿದೆ.

Advertisement

ಶನಿವಾರದ ಲೀಡ್ಸ್‌ ಸ್ಪರ್ಧೆಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 9 ವಿಕೆಟಿಗೆ 227 ರನ್‌ ಗಳಿಸಿದರೆ, ಪಾಕಿಸ್ಥಾನ 49.4 ಓವರ್‌ಗಳಲ್ಲಿ 7 ವಿಕೆಟಿಗೆ 230 ರನ್‌ ಬಾರಿಸಿತು.

156ಕ್ಕೆ 6ನೇ ವಿಕೆಟ್‌ ಉರುಳಿದಾಗ ಪಾಕಿಸ್ಥಾನಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ ಇಮಾದ್‌ ವಾಸಿಮ್‌ ಅಜೇಯ 49 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. 2 ವಿಕೆಟ್‌ ಕೂಡ ಉರುಳಿಸಿ ಆಲ್‌ರೌಂಡ್‌ ಪ್ರದರ್ಶನವಿತ್ತ ಇಮಾದ್‌ ಪಂದ್ಯಶ್ರೇಷ್ಠರೆನಿಸಿದರು.

ಅಫ್ಘಾನ್‌ ಎಂಟೂ ಪಂದ್ಯಗಳನ್ನು ಸೋತಿದ್ದು, ಕೊನೆಯ ಪಂದ್ಯದಲ್ಲಿ ವಿಂಡೀಸನ್ನು ಎದುರಿಸಲಿದೆ.

ನ್ಯೂಜಿಲ್ಯಾಂಡ್‌ ಎದುರು ಪಾಕಿಸ್ಥಾನದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಶಾಹೀನ್‌ ಅಫ್ರಿದಿ ಇಲ್ಲಿ 47 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉರುಳಿಸಿದರು. ಡೆತ್‌ ಓವರ್‌ಗಳಲ್ಲಿ ಇವರ ಬೌಲಿಂಗ್‌ ಹೆಚ್ಚು ಪರಿಣಾಮಕಾರಿಯಾಗಿತ್ತು. ಇಮಾದ್‌ ವಾಸಿಮ್‌ ಜತೆಗೆ ವಹಾಬ್‌ ರಿಯಾಜ್‌ ತಲಾ 2 ವಿಕೆಟ್‌ ಉರುಳಿಸಿದರು.ಅಫ್ಘಾನಿಸ್ಥಾನ ಪರ ಅYರ್‌ ಅಫ್ಘಾನ್‌ ಮತ್ತು ನಜೀಬುಲ್ಲ ಜದ್ರಾನ್‌ ಗರಿಷ್ಠ 42 ರನ್‌ ಹೊಡೆದರು.

Advertisement

ಅಫ್ಘಾನಿಸ್ಥಾನ
ರಹಮತ್‌ ಶಾ ಸಿ ಆಜಂ ಬಿ ಇಮಾದ್‌ 35
ಗುಲ್ಬದಿನ್‌ ನೈಬ್‌ ಸಿ ಸಫ‌ìರಾಜ್‌ ಬಿ ಅಫ್ರಿದಿ 15
ಹಶ್ಮತುಲ್ಲ ಶಾಹಿದಿ ಸಿ ಇಮಾದ್‌ ಬಿ ಅಫ್ರಿದಿ 0
ಇಕ್ರಮ್‌ ಅಲಿ ಖೀಲ್‌ ಸಿ ಹಫೀಜ್‌ ಬಿ ಇಮಾದ್‌ 24
ಅಸYರ್‌ ಅಫ್ಘಾನ್‌ ಬಿ ಶಾದಾಬ್‌ 42
ಮೊಹಮ್ಮದ್‌ ನಬಿ ಸಿ ಆಮಿರ್‌ ಬಿ ರಿಯಾಜ್‌ 16
ನಜೀಬುಲ್ಲ ಜದ್ರಾನ್‌ ಬಿ ಅಫ್ರಿದಿ 42
ಸಮಿಯುಲ್ಲ ಶಿನ್ವರಿ ಔಟಾಗದೆ 19
ರಶೀದ್‌ ಖಾನ್‌ ಸಿ ಫ‌ಕಾರ್‌ ಬಿ ಅಫ್ರಿದಿ 8
ಹಮೀದ್‌ ಹಸನ್‌ ಬಿ ರಿಯಾಜ್‌ 1
ಮುಜೀಬ್‌ ಔಟಾಗದೆ 7
ಇತರ 18
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 227
ವಿಕೆಟ್‌ ಪತನ: 1-27, 2-27, 3-57, 4-121, 5-125, 6-167, 7-202, 8-210, 9-219.
ಬೌಲಿಂಗ್‌:
ಇಮಾದ್‌ ವಾಸಿಮ್‌ 10-0-48-2
ಮೊಹಮ್ಮದ್‌ ಆಮಿರ್‌ 10-1-41-0
ಶಾಹೀನ್‌ ಅಫ್ರಿದಿ 10-0-47-4
ಮೊಹಮ್ಮದ್‌ ಹಫೀಜ್‌ 2-0-10-0
ವಹಾಬ್‌ ರಿಯಾಜ್‌ 8-0-29-2
ಶಾದಾಬ್‌ ಖಾನ್‌ 10-0-44-1

ಪಾಕಿಸ್ಥಾನ
ಫ‌ಕಾರ್‌ ಜಮಾನ್‌ ಎಲ್‌ಬಿಡಬ್ಲ್ಯು ಮುಜೀಬ್‌ 0
ಇಮಾಮ್‌ ಉಲ್‌ ಹಕ್‌ ಸ್ಟಂಪ್ಡ್ ಖೀಲ್‌ ಬಿ ನಬಿ 36
ಬಾಬರ್‌ ಆಜಂ ಬಿ ನಬಿ 45
ಮೊಹಮ್ಮದ್‌ ಹಫೀಜ್‌ ಸಿ ಶಾಹಿದಿ ಬಿ ಮುಜೀಬ್‌ 19
ಹ್ಯಾರಿಸ್‌ ಸೊಹೈಲ್‌ ಎಲ್‌ಬಿಡಬ್ಲ್ಯು ರಶೀದ್‌ 27
ಸಫ‌ìರಾಜ್‌ ಅಹ್ಮದ್‌ ರನೌಟ್‌ 18
ಇಮಾದ್‌ ವಾಸಿಮ್‌ ಔಟಾಗದೆ 49
ಶಾದಾಬ್‌ ಖಾನ್‌ ರನೌಟ್‌ 11
ವಹಾಬ್‌ ರಿಯಾಜ್‌ ಔಟಾಗದೆ 15
ಇತರ 10
ಒಟ್ಟು (49.4 ಓವರ್‌ಗಳಲ್ಲಿ 7 ವಿಕೆಟಿಗೆ) 230
ವಿಕೆಟ್‌ ಪತನ: 1-0, 2-72, 3-81, 4-121, 5-142, 6-156, 7-206.
ಬೌಲಿಂಗ್‌:
ಮುಜೀಬ್‌ ಉರ್‌ ರಹಮಾನ್‌ 10-1-34-2
ಹಮೀದ್‌ ಹಸನ್‌ 2-0-13-0
ಗುಲ್ಬದಿನ್‌ ನೈಬ್‌ 9.4-0-73-0
ಮೊಹಮ್ಮದ್‌ ನಬಿ 10-0-23-2
ರಶೀದ್‌ ಖಾನ್‌ 10-0-50-1
ಸಮಿಯುಲ್ಲ ಶಿನ್ವರಿ 8-0-32-0

ಪಂದ್ಯಶ್ರೇಷ್ಠ: ಇಮಾದ್‌ ವಾಸಿಮ್‌

Advertisement

Udayavani is now on Telegram. Click here to join our channel and stay updated with the latest news.

Next