Advertisement

ವಾಯು ಪ್ರದೇಶ: ಪಾಕ್‌ ಸ್ಪಷ್ಟನೆ

01:14 AM Jul 13, 2019 | mahesh |

ಇಸ್ಲಾಮಾಬಾದ್‌: ಭಾರತೀಯ ವಾಯು ನೆಲೆಗಳಲ್ಲಿ ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆ ನಡೆಸಲು ಸಿದ್ಧವಾಗಿ ನಿಂತಿರುವ ಯುದ್ಧ ವಿಮಾನಗಳನ್ನು ಐಎಎಫ್ ಹಿಂಪಡೆಯುವವರೆಗೆ ದೇಶದ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಈಬಗ್ಗೆ ಆ ದೇಶದ ಸಂಸತ್‌ ಸಮಿತಿಯೊಂದರ ಮುಂದೆ ಈ ಕುರಿತಂತೆ ಸ್ಪಷ್ಟನೆ ನೀಡಿರುವ ನಾಗರಿಕ ವಿಮಾನ ಸೇವಾ ಇಲಾಖೆಯ ಕಾರ್ಯದರ್ಶಿ ನುಸ್ರತ್‌, ವಾಯುಗಡಿ ನಿರ್ಬಂಧದ ತೆರವಿಗಾಗಿ ಭಾರತ, ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿದೆ. ಆದರೆ, ನಾವೂ ಸಹ ನಮ್ಮ ವಿಚಾರವನ್ನು ಭಾರತ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಬಾಲಕೋಟ್ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ವೈಮಾನಿಕ ನಿಷೇಧ ಹೇರಿಕೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next