Advertisement

ಮೂರನೇ ದಿನ ಕೇವಲ 5.2 ಓವರ್‌ಗಳ ಆಟ

11:15 PM Dec 13, 2019 | Sriram |

ರಾವಲ್ಪಿಂಡಿ: ಪಾಕಿಸ್ಥಾನ-ಶ್ರೀಲಂಕಾ ನಡುವಿನ ರಾವಲ್ಪಿಂಡಿ ಟೆಸ್ಟ್‌ ಪಂದ್ಯದಲ್ಲಿ ಮಳೆಯ ಆಟ ಮುಂದುವರಿದಿದೆ. 3ನೇ ದಿನ ಕೇವಲ 5.2 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದೆ.

Advertisement

6 ವಿಕೆಟಿಗೆ 263 ರನ್‌ ಮಾಡಿದ್ದ ಶ್ರೀಲಂಕಾ, ಈ ಕಿರು ಅವಧಿಯಲ್ಲಿ ತನ್ನ ಮೊತ್ತವನ್ನು 282ಕ್ಕೆ ವಿಸ್ತರಿಸಿತು. ಧನಂಜಯ ಡಿ ಸಿಲ್ವ 87 ಮತ್ತು ದಿಲುÅವಾನ್‌ ಪೆರೆರ 6 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ದಶಕದ ಬಳಿಕ ಟೆಸ್ಟ್‌ ಪಂದ್ಯದ ಆತಿಥ್ಯ ವಹಿಸುವ ಅವಕಾಶ ಪಡೆದ ಪಾಕಿಸ್ಥಾನಕ್ಕೆ ಮಳೆಯೇ ವಿಲನ್‌ ಆಗಿ ಕಾಡುತ್ತಿದೆ. ಇನ್ನೂ ಒಂದು ಇನ್ನಿಂಗ್ಸ್‌ ಕೂಡ ಮುಗಿಯದ ಕಾರಣ, ಈ ಪಂದ್ಯ ನೀರಸವಾಗಿ ಡ್ರಾಗೊಳ್ಳುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next