Advertisement
ಅಬುದಾಭಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾಕ್ಕೆ ಗಳಿಸಲು ಸಾಧ್ಯವಾದದ್ದು 9ಕ್ಕೆ 124 ರನ್ ಮಾತ್ರ. ಆದರೆ ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಪಾಕಿಸ್ಥಾನ ತೀವ್ರ ಸಂಕಟ ಹಾಗೂ ಒತ್ತಡಕ್ಕೆ ಸಿಲುಕಿತು. ಕೊನೆಗೂ ಒಂದು ಎಸೆತ ಬಾಕಿ ಉಳಿದಿರುವಾಗ 8 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ವಿಕುಮ್ ಸಂಜಯ ಪಾಲಾದ ಆಂತಿಮ ಓವರಿನಲ್ಲಿ ಪಾಕ್ ಜಯಕ್ಕೆ 3 ವಿಕೆಟ್‌ಗಳಿಂದ 12 ರನ್ ಅಗತ್ಯವಿತ್ತು. ಮೊದಲ ಎಸೆತದಲ್ಲೇ ಫಾಹಿಮ್ ಅಶ್ರಫ್ ವಿಕೆಟ್ ಬಿತ್ತು. 2ನೇ ಎಸೆತದಲ್ಲಿ ಶಾದಾಬ್ ಖಾನ್ ಒಂದು ರನ್ ತೆಗೆದರು. ಬಳಿಕ ಹಸನ್ ಅಲಿಗೆ ಲಾಂಗ್‌ಆಫ್ನಲ್ಲೊಂದು ಜೀವದಾನ ಲಭಿಸಿತು. ಇದರಿಂದ 3 ರನ್ ಕೂಡ ಬಂತು. 4ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಶಾದಾಬ್, ಮುಂದಿನ ಎಸೆತದಲ್ಲಿ 2 ರನ್ ಬಾರಿಸಿ ಲಂಕೆಯ ಕೈಯಿಂದ ಗೆಲುವನ್ನು ಕಸಿದೇ ಬಿಟ್ಟರು!
ಶಾದಾಬ್ ಗಳಿಕೆ 8 ಎಸೆತಗಳಿಂದ 16 ರನ್. ಬೌಲಿಂಗಿನಲ್ಲೂ ಮಿಂಚಿದ ಅವರು 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಒಂದು ವಿಕೆಟ್ ಉರುಳಿಸಿದ್ದರು. ಈ ಸಾಧನೆಗಾಗಿ ಶಾದಾಬ್‌ಗ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. 28 ರನ್ ಮಾಡಿದ ನಾಯಕ ಸಫìರಾಜ್ ಅಹ್ಮದ್ ಪಾಕ್ ಸರದಿಯ ಟಾಪ್ ಸ್ಕೋರರ್. ಅಹ್ಮದ್ ಶೆಹಜಾದ್ 27 ರನ್ ಮಾಡಿದರು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-9 ವಿಕೆಟಿಗೆ 124 (ಗುಣತಿಲಕ 51, ಸಮರವಿಕ್ರಮ 32, ಮುನವೀರ 19, ಫಾಹಿಮ್ ಅಶ್ರಫ್ 16ಕ್ಕೆ 3, ಹಸನ್ ಅಲಿ 31ಕ್ಕೆ 2). ಪಾಕಿಸ್ಥಾನ-19.5 ಓವರ್‌ಗಳಲ್ಲಿ 8 ವಿಕೆಟಿಗೆ 125 (ಸಫìರಾಜ್ 28, ಶೆಹಜಾದ್ 27, ಶಾದಾಬ್ ಔಟಾಗದೆ 16, ತಿಸರ ಪೆರೆರ 24ಕ್ಕೆ 3). ಪಂದ್ಯಶ್ರೇಷ್ಠ: ಶಾದಾಬ್ ಖಾನ್.