Advertisement
ರವಿವಾರದ ಪ್ರಶಸ್ತಿ ಸಮರದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಬಾಂಗ್ಲಾದೇಶವನ್ನು ಎದುರಿಸಲಿದೆ. ಪಾಕಿಸ್ಥಾನವನ್ನು ಮೀರಿಸಿ ದ್ವಿತೀಯ ಸ್ಥಾನಿಯಾದ ಬಾಂಗ್ಲಾದೇಶಕ್ಕೆ ಇದು ಮೊದಲ ಏಶ್ಯ ಕಪ್ ಫೈನಲ್ ಎಂಬುದು ವಿಶೇಷ.
Related Articles
ಶನಿವಾರದ ಲೀಗ್ ಪಂದ್ಯದಲ್ಲಿ ಭಾರತದ ಬಿಗಿಯಾದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ಥಾನಕ್ಕೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 72 ರನ್ ಮಾತ್ರ. ಭಾರತ 16.1 ಓವರ್‌ಗಳಲ್ಲಿ 3 ವಿಕೆಟಿಗೆ 75 ರನ್ ಮಾಡಿ ತನ್ನ 4ನೇ ಗೆಲುವು ಸಾಧಿಸಿತು.
Advertisement
ಪಾಕ್ ಸರದಿಯಲ್ಲಿ ಎರಡಂಕೆಯ ಗಡಿ ದಾಟಿದ್ದು ಸನಾ ಮಿರ್ (ಔಟಾಗದೆ 20) ಮತ್ತು ನಹಿದಾ ಖಾನ್ (18) ಮಾತ್ರ. ಏಕ್ತಾ ಬಿಷ್ಟ್ 4 ಓವರ್‌ಗಳ ಕೋಟಾದಲ್ಲಿ 14 ರನ್ನಿಗೆ 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಪೂನಂ ಯಾದವ್ (11ಕ್ಕೆ 1), ದೀಪ್ತಿ ಶರ್ಮ (13ಕ್ಕೆ 1), ಶಿಖಾ ಪಾಂಡೆ (6ಕ್ಕೆ 1) ಬೌಲಿಂಗ್ ಕೂಡ ಅಮೋಘ ಮಟ್ಟದಲ್ಲಿತ್ತು. ಒಟ್ಟು 69 ಡಾಟ್ ಬಾಲ್ ಎಸೆದ ಭಾರತ, ಎದುರಾಳಿಗೆ ಬಿಟ್ಟುಕೊಟ್ಟ ಬೌಂಡರಿ ಕೇವಲ 4.
ಚೇಸಿಂಗ್ ವೇಳೆ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮ ಅವರನ್ನು ಶೂನ್ಯಕ್ಕೆ ಕಳೆದುಕೊಂಡ ಭಾರತಕ್ಕೂ ಕುಸಿತದ ಭೀತಿ ಎದುರಾಯಿತು. ಇವರಿಬ್ಬರ ವಿಕೆಟ್ 5 ರನ್ ಆಗುವಷ್ಟರಲ್ಲಿ ಉರುಳಿತು. ಆದರೆ 3ನೇ ವಿಕೆಟಿಗೆ ಜತೆಯಾದ ಸ್ಮತಿ ಮಂಧನಾ (38) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೆ 34) ಜವಾಬ್ದಾರಿಯುತ ಆಟವಾಡಿ 65 ರನ್ ಪೇರಿಸಿದರು. ಗೆಲುವಿಗೆ ಇನ್ನೇನು 3 ರನ್ ಅಗತ್ಯವಿರುವಾಗ ಮಂಧನಾ ವಿಕೆಟ್ ಬಿತ್ತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-20 ಓವರ್‌ಗಳಲ್ಲಿ 7 ವಿಕೆಟಿಗೆ 72 (ಸನಾ ಮಿರ್ ಔಟಾಗದೆ 20, ನಹಿದಾ 18, ಏಕ್ತಾ 14ಕ್ಕೆ 3). ಭಾರತ-16.1 ಓವರ್‌ಗಳಲ್ಲಿ 3 ವಿಕೆಟಿಗೆ 75 (ಮಂಧನಾ 38, ಕೌರ್ ಔಟಾಗದೆ 34).
ಪಂದ್ಯಶ್ರೇಷ್ಠ: ಏಕ್ತಾ ಬಿಷ್ಟ್