Advertisement

ಜೆಯುಡಿಗೆ ಶಾಶ್ವತ ನಿಷೇಧ ಹೇರಲು ಪಾಕ್‌ ಚಿಂತನೆ

10:20 AM Apr 09, 2018 | Team Udayavani |

ಇಸ್ಲಾಮಾಬಾದ್‌: ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸುತ್ತಿರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡಿರುವ ಪಾಕಿಸ್ತಾನವು ಇದೀಗ ಕಳಂಕದಿಂದ ಹೊರಬರಲು ಶತಾಯಗತಾಯ ಯತ್ನಿಸುತ್ತಿದೆ. ಮುಂಬೈ ದಾಳಿಯ ಮಾಸ್ಟರ್‌ ಮೈಂಡ್, ಉಗ್ರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌-ಉದ್‌-ದಾವಾ ಮತ್ತು ಇತರೆ ಕೆಲವು ಉಗ್ರ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧಿಸಲು ಪಾಕಿಸ್ತಾನ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ 1997ರ ಉಗ್ರ ನಿಗ್ರಹ ಕಾಯ್ದೆಗೆ ಕೆಲವೊಂದು ತಿದ್ದುಪಡಿಗಳನ್ನು ತರಲಾಗಿದ್ದು, ಕರಡು ವಿಧೇಯಕವನ್ನು ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

Advertisement

ವಿಶೇಷವೆಂದರೆ, ಪಾಕಿಸ್ತಾನದ ಈ ಕ್ರಮಕ್ಕೆ ಇಲ್ಲಿನ ಸೇನೆಯೂ ಬೆಂಬಲ ನೀಡಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. ಅಮೆರಿಕ, ಯುಕೆ, ಫ್ರಾನ್ಸ್‌ ಮತ್ತು ಜರ್ಮನಿಯು ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ನಿಗಾ ಸಂಸ್ಥೆಯ ‘ಹಣಕಾಸು ಅವ್ಯವಹಾರ ಹಾಗೂ ಉಗ್ರರಿಗೆ ಹಣಕಾಸು ಪೂರೈಕೆ ಮಾಡುತ್ತಿರುವ ರಾಷ್ಟ್ರ’ ಎಂಬ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತಾಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸುಗ್ರೀವಾಜ್ಞೆಯ ಮೂಲಕ ಉಗ್ರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದರೂ, ಅದರ ಅವಧಿ ಇರುವುದು 120 ದಿನಗಳು ಮಾತ್ರ. ಹಾಗಾಗಿ, ಈ ವಿಧೇಯಕ ಮಂಡಿಸಿ ಕಾನೂನು ಜಾರಿಗೊಳಿಸಲು ಪಾಕ್‌ ಪ್ರಯತ್ನಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next