ಇಸ್ಲಾಮಾಬಾದ್: ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿ ಹಿಂದೂ ಸಮುದಾಯಕ್ಕೆ ದೇಗುಲ ನಿರ್ಮಾಣಕ್ಕೆ ಕೊನೆಗೂ ಜಮೀನು ನೀಡಲಾಗಿದೆ. ಸೋಮವಾರ ನಡೆದಿದ್ದ ಬೆಳವಣಿಯಲ್ಲಿ ಇಸ್ಲಾಮಾಬಾದ್‌ನ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ದೇಗುಲ ನಿರ್ಮಾ ಣಕ್ಕೆ ಜಮೀನು ಮಂಜೂರು ಮಾಡಿ ಹೊರಡಿದ್ದ ಆದೇಶ ರದ್ದುಪಡಿಸಲಾಗಿದೆ ಎಂದು ತಿಳಿಸಿತ್ತು.
ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ವೇಳೆ ಪ್ರಾಧಿಕಾರದ ನಿಲುವು ಬಹಿರಂಗ ವಾಗಿತ್ತು. ಈ ಬೆಳವಣಿಗೆ ಸಾಮಾಜಿಕ ಜಾಲತಾಣ ಗಳಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಸಿಡಿಎ ಪರ ವಾದ ಮಂಡಿಸಿದ ವಕೀಲ ಜಾವೇದ್ ಇಕ್ಬಾಲ್ ಈ ವರ್ಷದ ಫೆಬ್ರವರಿಯಲ್ಲಿಯೇ ದೇಗುಲ ನಿರ್ಮಾಣಕ್ಕೆ ಎಂದು ಜಮೀನು ಮಂಜೂರು ಮಾಡಿ ಹೊರಡಿಸಲಾಗಿದ್ದ ಆದೇಶ ರದ್ದು ಮಾಡಲಾಗಿತ್ತು ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡಿದ್ದರು.
2016ರಲ್ಲಿ ಪಾಕಿಸ್ತಾನ ರಾಜಧಾನಿ ವ್ಯಾಪ್ತಿಯಲ್ಲಿ ಮೊದಲ ದೇಗುಲ, ಸ್ಮಶಾನ, ಸಮುದಾಯ ಭವನ ನಿರ್ಮಾಣಕ್ಕಾಗಿ 0.5 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಅಲ್ಲಿ ಯಾವುದೇ ನಿರ್ಮಾಣ ಕಾರ್ಯ ಶುರು ಮಾಡಿಲ್ಲ ಎಂಬ ಕಾರಣವೊಡ್ಡಿ ಮಂಜೂರು ಆದೇಶವನ್ನು ಫೆಬ್ರವರಿಯಲ್ಲಿ ರದ್ದು ಮಾಡಲಾಗಿತ್ತು.
ಹೊಸ ದೇವಸ್ಥಾನ ಉದ್ಘಾಟನೆ
ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕಳೆದ ವರ್ಷ ಕಿಡಿಗೇಡಿಗಳಿಂದ ನಾಶವಾಗಿದ್ದ 100 ವರ್ಷಗಳಿಂತಲೂ ಹಳೆಯದಾಗಿದ್ದ ದೇಗುಲವನ್ನು ಪುನರ್ ನಿರ್ಮಿಸಲಾಗಿದೆ. ತೆರಿ ಎಂಬ ಗ್ರಾಮದಲ್ಲಿದ್ದ ಪರಮ್ ಹನ್ಸ್ ಜಿ ಮಹಾರಾಜ್ ದೇಗುಲವನ್ನು 2020ರ ಡಿಸೆಂಬರ್‌ನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ನಾಶಗೊಳಿಸಿದ್ದರು.
ಪುನರ್ ನಿರ್ಮಾಣಗೊಂಡ ದೇಗುಲವನ್ನು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲಾlರ್ ಅಹ್ಮದ್ ಉದ್ಘಾಟಿಸಿದ್ದಾರೆ. ದೇಗುಲ ನಾಶಗೊಂಡಿದ್ದ ವೇಳೆ, ಸೂಕ್ತ ತನಿಖೆ ನಡೆಸುವಂತೆಯೂ ಅವರು ಆದೇಶ ನೀಡಿದ್ದರು. ಇದೇ ಕಾರ್ಯಕ್ರಮದಲ್ಲಿ ದೀಪಾವಳಿಯನ್ನೂ ಆಚರಿಸಲಾಯಿತು.